ಮೊಳಕಾಲ್ಮೂರು:- ಹಿರಿಯೂರಿನ ಬೆಸ್ಕಾಂ ವಿಭಾಗೀಯ ಓ ಎ ತಿಮ್ಮರಾಯಪ್ಪ ರೈತರೊಂದಿಗೆ ಅಸಭ್ಯವಾಗಿ ವರ್ಜಿಸುತ್ತಾ ರೈತರನ್ನು ಕಚೇರಿಯಿಂದ ಹೊರ ಹೋಗುವಂತೆ, ಗದರಿಸುತ್ತಿರುವ ದರ್ಪ ತೋರಿಸುತ್ತಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು:-ಬೇಡ ರೆಡ್ಡಿಹಳ್ಳಿಬಸವ ರೆಡ್ಡಿ
ಹಿರಿಯೂರಿನ ಬೆಸ್ಕಾಂ ವಿಭಾಗೀಯ ಓ ಎ ತಿಮ್ಮರಾಯಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಒತ್ತಾಯಿಸಿದರು.ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಕಾರ್ಯಪಾಲಕ ಅಭಿಯಂತರರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಬೆಸ್ಕಾಂ ಉಪ ವಿಭಾಗಗಳಿಗೆ ಗ್ರಾಹಕರಿಗ ಅಭಿವೃದ್ಧಿಪಡಿಸಲು ಸರಕು ಸಾಮಗ್ರಿಗಳನ್ನು ವಿತರಿಸುವಲ್ಲಿ ತಾರತಮ್ಮ ಮಾಡುತ್ತಿದ್ದ ರೈತರಿಗೆ ಟಿಸಿ ಕೊಡಲು ಘನ ಗೋರ ಅನ್ಯಾಯವನ್ನು ಮಾಡುತ್ತಿರುವ ಮತ್ತು ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳಿಗೆ ಸರಕು ಸಾಮಾನುಗಳನ್ನು ವಿತರಿಸುವಲ್ಲಿ ಉಗ್ರಾಣದ ಉಸ್ತುವಾರಿಯಾಗಿರುವ ಓ ಎ ತಿಮ್ಮ ರಾಮರಾಯಪ್ಪ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಇವ್ರು ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ರೈತರಿಗೆ ಗ್ರಾಹಕರಿಗೆ ಅನ್ಯಾಯವಾಗಿದ್ದು ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವುದನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತರವರು ಮಾತನಾಡಿ. ಇಂತಹ ಅಧಿಕಾರಿ ನಮಗೆ ಬೇಕೆ ರೈತರೊಂದಿಗೆ ಅಸಬ್ಬವಾಗಿ ವರ್ತಿಸುತ್ತಾ ರೈತರನ್ನು ಕಚೇರಿಯಿಂದ ಗದರಿಸುತ್ತಾ ಧರ್ಮ ತೋರಿಸುತ್ತಿರುವ ತಿಮ್ಮರಾಯಪ್ಪನವರನ್ನು ಈ ಕೂಡಲ ಅಮಾನತುಗೊಳಿಸಬೇಕು ಇಲ್ಲದಿದ್ದಲ್ಲಿ ನಾವು ಉಗ್ರ ಹೋರಾಟಕ್ಕೆ ಇಡಬೇಕಾಗುತ್ತದೆ ಎಂದರು ಅದೇ ರೀತಿ ಇವರ ವಿರುದ್ಧ ಅಕ್ರಮ ಆಸ್ತಿ ತನಿಖೆ ಲೋಕಾಯುಕ್ತಕ್ಕೆ ದೂರು ನೀಡಬೇಕು
ಎಂದು ಒತ್ತಾಯಿಸಿದರು ಈ ಅಧಿಕಾರಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೀವು ಯಾರಿಗೆ ಬೇಕಾದರೂ ದೂರ ಕೊಡಿ ನನಗೆ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಸಾಹೇಬರು ಇರುವವರೆಗೂ ನನ್ನನ್ನು ಕದಲಿಸುವುದು ಆಗೋದಿಲ್ಲ ಎಂದು ರೈತರಿಗೆ ಧಮ್ಕಿ ಹಾಕುತ್ತಾರೆ, ಅದೇ ರೀತಿ ರೈತರಿಗೆ ಇಂದಿನಂತೆ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಿ 25,000 ಕಟ್ಟಿಸಿಕೊಂಡು ಟಿಸಿ ಕಂಬಗಳನ್ನು ವಿತರಿಸಬೇಕು ರೈತ ಸ್ವಂತ ಖರ್ಚಿನಲ್ಲಿ ವಿದ್ಯುತ್ ತೆಗೆದುಕೊಳ್ಳುವುದು ಕಷ್ಟ ಸಾಧ್ಯ, ವಿದ್ಯುತ್ ಕಂಪನಿ ಖಾಸಗಿಕರಣ ಮಾಡುವ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಬಿಡಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯೂರಿನ ಬೆಸ್ಕಾಂ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್, ರಾಮಚಂದ್ರ ಸುತಾರ್ ಮೊಳಕಾಲ್ಮುರಿನ ಎ ಡಬಲ್ ಇ ಶಿವಪ್ರಸಾದ್ ಇಂಜಿನಿಯರ್ ಚಂದ್ರಕಾಂತ್ ರೆಡ್ಡಿ , ರೈತ ಸಂಘದ ಚಂದ್ರಣ್ಣ ಪಾಪಯ್ಯ ಮಹೇಶ್ ಬಸವರಾಜ್ ಕರ್ನಾಟಕ ಪ್ರಾಂತ ರೈತ ಸಂಘದ ದಾನಶೂರ ನಾಯಕ ನಾಗೇಶ್ ರಾಮಮೂರ್ತಿ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ :-ಪಿಎಂ ಗಂಗಾಧರ