Ad imageAd image

ಹಾಲಿನ ಕ್ಯಾನ್ ಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ

Bharath Vaibhav
ಹಾಲಿನ ಕ್ಯಾನ್ ಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ
WhatsApp Group Join Now
Telegram Group Join Now

ಬೆಳಗಾವಿ :-  ರಾಜ್ಯ ಸರ್ಕಾರ ರೈತರಿಗೆ ಶೀಘ್ರವೇ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಹಾಗೂ ಹಾಲಿನ ಪ್ರೋತ್ಸಾಹ ಧನವನ್ನು ಐದರಿಂದ ಹತ್ತು ರೂಪಾಯಿಗೆ ಏರಿಕೆ ಮಾಡಬೇಕು ಮತ್ತು ಸದ್ಯ ಗ್ರಾಹಕರಿಗೆ ಏರಿಕೆ ಮಾಡಿರುವ ಹಾಲಿನ ದರ ಏರಿಕೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಮನವಿ ನೀಡಲಾಯಿತು

ಬೆಳಗಾವಿ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾ.ಜ.ಪ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಮಾತನಾಡಿ ರಾಜ್ಯ ಸರ್ಕಾರ ಹಾಲಿನ ದರವನ್ನು ಏರಿಸಿ ರಾಜ್ಯಾದ್ಯಂತ ಜನ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದು ಇದು ಜನರ ಮೇಲೆ ಸರ್ಕಾರ ಲೋಕಸಭೆ ಚುನಾವಣೆಯ ಸೋಲಿನ ಪ್ರತಿಕಾರವನ್ನು ತೀರಿಸಿಕೊಂಡಂತೆ ಕಾಣುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಶೀಘ್ರವೇ ಹಾಲಿನ ದರವನ್ನು ಇಳಿಕೆ ಮಾಡಿ ಜೊತೆಗೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಿರುವುದನ್ನು ನಿಲ್ಲಿಸಿ ಜನಪರ ಆಡಳಿತವನ್ನು ನೀಡಬೇಕು ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ಹೇಳಿದರು.
ಮಹಾನಗರ ಜಿಲ್ಲಾ ಅಧ್ಯಕ್ಷರಾದ ಗೀತಾ ಸುತಾರ ಮಾತನಾಡಿ ರಾಜ್ಯ ಸರ್ಕಾರವು ರೈತರಿಗೆ ಶಿಘ್ರವೇ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಹಾಗೂ ಹಾಲಿನ ಪ್ರೋತ್ಸಾಹ ಧನವನ್ನು 5 ರಿಂದ 10 ರೂಪಾಯಿಗೆ ಏರಿಕೆ ಮಾಡಬೇಕು ಜೋತೆಗೆ ಸದ್ಯ ಏರಿಕೆ ಮಾಡಿರುವ ಗ್ರಾಹಕರ ಹಾಲಿನ ದರ ಇಳಿಸಬೇಕೆಂದು ಹೇಳಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಬೂದಿಹಾಳ ಮಾತನಾಡಿ ಕಾಂಗ್ರೆಸ್ ಸರ್ಕಾರ ರೈತರಿಗೆ ಶಿಘ್ರವೇ ಹಾಲಿನ ಪ್ರೋತ್ಸಾಹ ಧನವನ್ನು 5 ರಿಂದ 10 ರೂಪಾಯಿಗೆ ಏರಿಕೆ ಮಾಡಬೇಕು. ಏರಿಕೆ ಮಾಡಿರುವ ಗ್ರಾಹಕರ ಹಾಲಿನ ದರವನ್ನು ಶೀಘ್ರವೇ ಇಳಿಕೆ ಮಾಡದಿದ್ದರೆ ರೈತ ಮೋರ್ಚಾ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಅದಕ್ಕೆ ಸರ್ಕಾರವೇ ಹೊಣೆ ಯಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಲಪ್ಪ ಶಹಪುರಕರ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್ ಎಸ್ ಸಿದ್ದನಗೌಡರ್, ರಾಜ್ಯ ಸಾಮಾಜಿಕ ಜಾಲತಾಣ ಸಮಿತಿ ಸದಸ್ಯ ನಿತಿನ್ ಚೌಗಲೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಶ್ರೀ ದೇಸಾಯಿ, ರಾಜಶೇಖರ್ ಡೋಣಿ, ಮಲ್ಲಿಕಾರ್ಜುನ್ ಮಾದಮ್ಮನವರ್, ಸಚಿನ್ ಕಡಿ, ಈರಣ್ಣ ವಾರದ, ಚಂದ್ರಶೇಖರಯ್ಯ ಹಿರೇಮಠ್, ಸಂತೋಷ ಹಡಪದ, ಶಂಕರ್ ಚೌಡಣ್ಣವರ, ಲಕ್ಕಪ್ಪ ಕಾರಗಿ, ಸುಭಾಷ್ ತುರಮರಿ, ವಿಠ್ಠಲ್ ಸಾಯಣ್ಣವರ, ಲೀನಾ ಟೋಪಣ್ಣವರ್, ರಾಮು ಸಲಬಯ್ಯನವರಮಠ ಹಾಗೂ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!