ಹುಬ್ಬಳ್ಳಿ:-ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಹಾಗೂ ಸಾರ್ವಜನಿಕರ ಶಾಂತಿ, ನೆಮ್ಮದಿ ಹಾಳು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹು-ಧಾ ನೂತನ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಡಿಗಳನ್ನು ಮಟ್ಟ ಹಾಕಲು ರೌಡಿ ಪರೇಡ್ ಮಾಡಲಾಗುತ್ತದೆ. ಅದರಿಂದ ಎಲ್ಲವನ್ನೂ ಮಟ್ಟ ಹಾಕಲು ರೌಡಿ ಪರೇಡ್ ಮಾಡಲಾಗುತ್ತದೆ. ಆದ್ದರಿಂದ ಎಲ್ಲವನ್ನೂ ಮಟ್ಡ ಹಾಕಲು ಆಗುವುದಿಲ್ಲ. ರೌಡಿಗಳು ಎಲ್ಲ ರೌಡಿಗಳೇ ಕೆಟ್ಟ ರೌಡಿಗಳು, ಒಳ್ಳೆ ರೌಡಿಗಳು ಅಂತ ಏನಿಲ್ಲಾ. ಶಾಂತಿ ಕದಡುವವರ ಮೇಲೆ ಕ್ರಮ ಕ್ರಮಕೈಗೊಳ್ಳಲಾಗುತ್ತೆ ಎಂದರು.
ಈಗಾಗಲೇ ಹಿಂದಿನ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಈಗಾಗಲೇ ಠಾಣೆಗಳ ಭೇಟಿ ಮಾಡಿದ್ದೇನೆ ಹಿಂದಿನ ಪ್ರಕರಣ ನಡೆದ ಸೂಕ್ಷ್ಮ ಪ್ರದೇಶಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳತ್ತೇನೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲಸ ಮಾಡುವಾಗ ಸಾರ್ವಜನಿಕರ ಸಹಕಾರ ಬೇಕು ಎಂದವರು ಹೇಳಿದರು. ಚಾಕು ಇಟ್ಟುಕೊಂಡು ರೀಲ್ಸ್ ಶೋಕಿ ಮಾಡಿದರೇ ಇನ್ನೊಂದು ಎಚ್ಚರಿಕೆ ರೀಲ್ಸ್ ಆಗುತ್ತದೆ ಎಂದರು.
ಇನ್ನೂ ಗಾಂಜಾ, ಡ್ರಗ್ಸ್ ಕಡಿವಾಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಗಾಂಜಾ ಉಪಯೋಗ ದೊಡ್ಡ ಶೋಕಿಯಾಗಿ ಪರಿಣಮಿಸಿದ್ದು, ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದರು. ಇನ್ನೂ ಮಾದಕ ದ್ರವ್ಯಗಳ ಕುರಿತಂತೆ ಎಲ್ಲಾ ವಸ್ತುಗಳ ಮೇಲೆ ಕಡಿವಾಣ ಹಾಕಲಾಗುವುದು ಎಂದರು. ಮಾದಕ ವಸ್ತುಗಳು ಗೆದ್ದಲು ರೀತಿ ಹಾಳು ಮಾಡುತ್ತೆ, ವಿದ್ಯಾರ್ಥಿಗಳಲ್ಲದೇ ಹಲವರು ಚಟಕ್ಕೆ ಬಿದ್ದಿದ್ದು, ಅದರ ತಡೆಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಹೆಣ್ಣು ಮಕ್ಕಳ ರಕ್ಷಣೆ ನಮ್ಮ ಆದ್ಯ ಕರ್ತವ್ಯ:ಹು-ಧಾ ಅವಳಿನಗರದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಚೆನ್ನಮ್ಮ ಪಡೆಯಿದೆ. ಹೆಣ್ಣುಮಕ್ಕಳ ರಕ್ಷಣೆಗೆ ಸಾರ್ವಜನಿಕರು ಮುಂದಾಗಬೇಕು. ಹೆಣ್ಣುಮಕ್ಕಳು ತಮ್ಮ ತೊಂದರೆಗಳ ಬಗ್ಗೆ ಧೈರ್ಯವಾಗಿ ಹೇಳಿಕೊಳ್ಳಬೇಕು, ೧೧೨ ಕರೆ ಮಾಡಿ ದೂರು ನೀಡಬಹುದು ಹೀಗಾಗಿ ಹೆಣ್ಣು ಮಕ್ಕಳ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದರು.
ಸೈಬರ್ ಅಪರಾಧ ನಿಯಂತ್ರಣಕ್ಕೆ ಸರ್ಕಾರ ಆದ್ಯತೆ :ಸೈಬರ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಜಾಗೃತಿ ಸಿಬ್ಬಂದಿಗೆ ತರಬೇತಿ ಅಗತ್ಯ. ಆನ್ ಲೈನ್ ವ್ಯವಹಾರ ಖಾತ್ರಿ ಇರಲಿ, ಎಚ್ಚರ ಅಗತ್ಯವಾಗಿದ್ದು, ಇಲಾಖೆಯಿಂದಲ್ಲೂ ಸಹ ಸೈಬರ್ ಕ್ರೈಂ ಗೆ ಕಡಿವಾಣ ಹಾಕಲಾಗುವುದು ಎಂದರು.
ವರದಿ:-ಸುಧೀರ