Ad imageAd image

ಅದರಗುಂಚಿ ಗ್ರಾಮದಲ್ಲಿ ಜುಲೈ 9ರಂದು ಉದ್ಯೋಗ ಮೇಳ

Bharath Vaibhav
ಅದರಗುಂಚಿ ಗ್ರಾಮದಲ್ಲಿ ಜುಲೈ 9ರಂದು ಉದ್ಯೋಗ ಮೇಳ
WhatsApp Group Join Now
Telegram Group Join Now

ಹುಬ್ಬಳ್ಳಿ:-ತಾಲೂಕಿನ ಅದರಗುಂಚಿಯ ಸಿ‌.ಆಯ್.ಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸಿ.ಆಯ್.ಸಿ ಸ್ನಾತಕೋತ್ತರ (ಎಂ.ಕಾಂ) ಕೇಂದ್ರ ಸಹಯೋಗದಲ್ಲಿ ಜಿಲ್ಲಾ ಉದ್ಯೋಗ ಕೇಂದ್ರದಿಂದ ಉದ್ಯೋಗ ಮೇಳವನ್ನು ಜುಲೈ 9 ರಂದು ಅದರಗುಂಚಿಯ ಸಿ.ಆಯ್‌.ಸಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿ.ಆಯ್‌.ಸಿ, ಗ್ರಾ.ಶಿ.ಸಂ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಫ್. ಭರಮಗೌಡ್ರ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು ಅಂದು ಬೆ. 9 ರಿಂದ 4 ಗಂಟೆಯವರೆಗೆ ಉದ್ಯೋಗ ಮೇಳ ಇರಲಿದ್ದು, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ಸತತ ೫ ನೇ ಬಾರಿಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್. ಸಿ, ಪಿಯಿಸಿ, ಐಟಿಐ, ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಬಹುದು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಾಜಿ ಶಾಸಕರು ಹಾಗೂ ಸಿ.ಆಯ್.ಸಿ.ಗ್ರಾ.ಶಿ.ಸಂ ಅಧ್ಯಕ್ಷರಾದ ಎಸ್.ಐ. ಚಿಕ್ಕನಗೌಡ್ರ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆಂದರು.ಈ ಸಂದರ್ಭದಲ್ಲಿ ಸಿ‌.ಆಯ್.ಸಿ‌ ಗ್ರಾ.ಶಿ‌.ಸಂ. ಆಡಳಿತಧಿಕಾರಿ ಎಸ್.ಟಿ. ಭೈರಪ್ಪನವರ, ಎಸ್‌.ಎಮ್‌‌. ಕಳಸೂರ, ಎಂ.ಕಾಂ. ವಿಭಾಗದ ಮುಖ್ಯಸ್ಥರಾದ ಸಿ.ಎಸ್.ಭರಮಗೌಡ್ರ, ರಾಜು ಪಾಟೀಲ್ ಪಾಲ್ಗೊಂಡಿದ್ದರು.

  ವರದಿ:-ಸುಧೀರ್ ‌ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!