ಬೆಳಗಾವಿ : –ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಕಾಲೇಜು ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಅಭಿವೃದ್ಧಿ ಸಂಸ್ಥೆಯ ಸಿಲ್ಕ್ ಇಂಡಿಯಾ-2024 ಎಂಬ ಪರಿಶುದ್ಧ ರೇಷ್ಮೆ ಸೀರೆ ಮತ್ತು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಂದಿನಿಂದ ಪ್ರಾರಂಭವಾಯಿತು.

ಭಾರತದ ಎಲ್ಲ ರಾಜ್ಯಗಳಿಂದ ಸುಪ್ರಸಿದ್ಧ, ಪರಿಶುದ್ಧ ರೇಷ್ಮೆ ಸೀರೆಗಳು ಹಾಗೂ ರೇಷ್ಮೆ ಉತ್ಪನ್ನಗಳು ಮೇಳದಲ್ಲಿ ಲಭ್ಯವಿದೆ. ವಿಶೇಷವಾಗಿ ಮದುವೆಗೆ ಬೇಕಾಗುವ ಎಲ್ಲ ಬಗೆಯ ಪ್ಯಾನ್ಸಿ ರೇಷ್ಮೆ ಉತ್ಪನ್ನಗಳು ದೊರೆಯುತ್ತದೆ.

ಮೇಳವು ಜುಲೈ ೧೨ ವರೆಗೆ ಬೆಳಿಗ್ಗೆ 10:30 ರಿಂದ ಸಂಜೆ 8:30ರವರೆಗೆ ಉಚಿತ ಪ್ರವೇಶದೊಂದಿಗೆ ತೆರೆದಿರುತ್ತದೆ. ಸಾರ್ವಜನಿಕರು ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಆಯೋಜಕ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಅಭಿನಂದ ತಿಳಿಸಿದ್ದಾರೆ.
ವರದಿ ಪ್ರತೀಕ ಚಿಟಗಿ




