Ad imageAd image

ಉತ್ತಮ ಆರೋಗ್ಯ, ಜೀವನಕ್ಕಾಗಿ ಯುವ ಪೀಳಿಗೆ ಯೋಗವ ಮೈಗೂಡಿಸಿಕೊಳ್ಳಿ- ಲಗ್ಗೆರೆ ನಾರಾಯಣಸ್ವಾಮಿ

Bharath Vaibhav
ಉತ್ತಮ ಆರೋಗ್ಯ, ಜೀವನಕ್ಕಾಗಿ ಯುವ ಪೀಳಿಗೆ ಯೋಗವ ಮೈಗೂಡಿಸಿಕೊಳ್ಳಿ- ಲಗ್ಗೆರೆ ನಾರಾಯಣಸ್ವಾಮಿ
WhatsApp Group Join Now
Telegram Group Join Now

ಬೆಂಗಳೂರು : -ಯೋಗವು ಪ್ರತಿಯೊಬ್ಬ ಮನುಷ್ಯನಿಗೂ ಅತ್ಯವಶ್ಯಕವಾದದ್ದು ಎಂದು
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಅರ್ಪಿತ ಸೇವಾ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ ಹೇಳಿದರು.

ಅವರು ಲಗ್ಗೆರೆಯ ಚೌಡೇಶ್ವರಿ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಅಂತರ್ ಶಾಲಾ, ಕಾಲೇಜು ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಪತಂಜಲಿ ಯೋಗ ಕೇಂದ್ರ ಹಾಗೂ ಡಾ. ಜಗದೀಶ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಯೋಗ ಸ್ಪರ್ಧೆ ಶಿಬಿರ ಕಾರ್ಯಕ್ರಮಕ್ಕೆ ದೀಪ ಬೆಳಗಿ ಉದ್ಘಾಟಿಸಿದರು ನಂತರ ಅವರು ಮನುಷ್ಯನು ಮನದಲ್ಲಿಟ್ಟುಕೊಂಡು ಯೋಗಾದ ಪಿತಾಮಹ ಎಂದೇ ಹೆಸರುವಾಸಿಯಾದ ತಿರುಮಲೆ ಕೃಷ್ಣಮಾಚಾರ್ಯ ಅವರು ವಿನ್ಯಾಸ ಯೋಗದ ಶಿಲ್ಪಿ ಎಂದು ಹೇಳಿದರೆ ತಪ್ಪಾಗಲಾರದು ಯೋಗವು ದೇಹದೊಡನೆ ಕಾರ್ಯನಿರ್ವಹಿಸುವುದಲ್ಲದೆ ಆತ್ಮವನ್ನು ಸಾಕ್ಷಾತ್ಕರಿಸಿ ಕೊಳ್ಳುವ ಬೌದ್ಧಿಕ ಜ್ಞಾನ ಅಭಿವೃದ್ಧಿಗೊಳಿಸುತ್ತದೆ ದೇಹ ಮನಸ್ಸು ನೆಮ್ಮದಿ ಆತ್ಮ ಶುದ್ಧಿ ಕಾರಣವಾಗುತ್ತದೆ.

ಈ ಯೋಗಾಸನವು ಸುಮಾರು 500 ವರ್ಷಗಳ ಹಿಂದೆ ಭಾರತದಲ್ಲಿ ಯೋಗ ಪದ್ಧತಿ ರೂಢಿಯಲ್ಲಿರುತ್ತದೆ ಯೋಗವನ್ನು ಇಂದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ ಯೋಗದ ಮಹತ್ವವನ್ನು ಜಗಕ್ಕೆ ಸಾರುವ ಉದ್ದೇಶದಿಂದ ಪ್ರತಿ ವರ್ಷವೂ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ನಮ್ಮ ಭಾರತ ಸರ್ಕಾರವು ಜಾರಿಗೆ ತಂದು ಆಚರಿಸುತ್ತಾ ಬರುತ್ತಿದೆ ಆದ್ದರಿಂದ ನಮ್ಮ ಆರೋಗ್ಯ , ಶ್ರೇಯೋಭಿವೃದ್ಧಿಗಾಗಿ ಈಗಿನ ಯುವ ಪೀಳಿಗೆ ಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂದು ಲಗ್ಗೆರೆ ನಾರಾಯಣ ಸ್ವಾಮಿ ಯುವ ಪೀಳಿಗೆಗೆ ಸಲಹೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಪರಿವೀಕ್ಷಕ ಸಿ.ಬಿ ಅಶೋಕ್, ಗ್ರಾಂ ಪಂಚಾಯತ್ ಅಧ್ಯಕ್ಷ ರಾಮಯ್ಯ ಮಂಜುನಾಥ್,ಎಸ್ ಬಸವರಾಜು, ಗಾಯಕ ಅಮರ್ ನಾಥ್ ಸ್ವಾಮಿ, ಶ್ರೀಮತಿ ವಿನುತ, ಅಲ್ಪ ಇಂಗ್ಲಿಷ್ ಶಾಲೆಯ ಲಲಿತ,ಆರ್.ವಿ.ಎಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಲೋಕೇಶ್,ಎಂಎಂ ಕೆವಿ ಶಾಲೆ ಸಂಸ್ಥಾಪಕ ಮಣ್ಣುರ್, ವಿವಿಧ ಶಾಲಾ ಮುಖ್ಯಸ್ಥರಾದ ಪ್ರೇಮಕುಮಾರಿ, ಜಯರಾಮಯ್ಯ, ಈಶ್ವರ್ ಪ್ರಸಾದ್ ಸೇರಿದಂತೆ ಲಗ್ಗೆರೆ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!