ರಾಯಚೂರು:- ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಿದ್ದ ಚಿರತೆಗೆ ಗ್ರಾಮಸ್ಥರು ಹೊಡೆದು ಸಾಯಿಸಿದ್ದಾರೆ.
ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಬೆಟ್ಟದಲ್ಲಿ ಅಡಗಿ ಕುಳಿತಿತ್ತು. ಗ್ರಾಮಸ್ಥರು ಬೆತ್ತ ಬಡಿಗೆ ಸಮೇತ ತೆರಳಿ ಅದನ್ನು ಕೊಂದು ಹಾಕಿದ್ದಾರೆ. ಅರಣ್ಯ ಇಲಾಖೆಯ ನಿಷ್ಕ್ರಿಯೆಯಿಮದ ಇವತ್ತು ಚಿರತೆ ಸಾವಾಗಿದೆ ಎಂಬ ಮಾತುಗಳು ಕೆಳಿ ಬರುತ್ತಿವೆ.
ಈಗಾಗಲೇ ಚಿರತೆ ಊರಲ್ಲಿ ಕಾಣಿಸಿಕಿಂಡಿತ್ತು. ನಾಯಿಗಳ ಮೇಲೆ ದಾಳಿ ನಡೆಸಿತ್ತು. ಇಷ್ಟಾದರೂ, ಇಲಾಖೆ ಸ್ತಳಕ್ಕೆ ತೆರಳಿರಲಿಲ್ಲ.ಚಿರತೆ ಹಿಡಿಯಲು ಪ್ರಯತ್ನ ಮಾಡಿಲ್ಲ .ಗಿಡ,ಮರ, ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದರೂ, ಇವರು ಕ್ರಮ ಜರುಗಿಸಿಲ್ಲ.ಅದಕ್ಕೆ ಇವತ್ತು ಚಿರತೆ ಗ್ರಾಮಸ್ಥರ ಬೆತ್ತ ಬಡಿಗೆ ಏಟಿಗೆ ಪ್ರಾಣ ಬಿಟ್ಟಿದೆ. ಚಿರತೆ ಕೊಂದವರ ಮೇಲೆ ಪ್ರಕರಣ ದಾಖಲಿಸಲು ಎಎಸ್ಪಿ ಶಿವಕುಮಾರ ಅವರು ದೇವದುರ್ಗ ಪಿಎಸ್ಐಗೆ ಸೂಚನೆ ಕೊಟ್ಟಿದ್ದಾರೆ.
ವರದಿ:- ಗಾರಲ ದಿನ್ನಿ ವೀರನಗೌಡ