ಹುಮನಾಬಾದ :- ಹುಡಗಿ ಗ್ರಾಮದ ಹಳ್ಳದಲ್ಲಿ ಆಕಸ್ಮಿಕವಾಗಿ ನೂರಾರು ಮೀನುಗಳು ಸಾವುಗೊಂಡ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ PDO,ಅಧ್ಯಕ್ಷರು,ಉಪಾಧ್ಯಕ್ಷರು ಹಾಗು ಸದಸ್ಯರು ಕೂಡಿ ಸಹಾಯಕ ಪರಿಸರ ಅಧಿಕಾರಿಗಳ ತಂಡದೊಂದಿಗೆ ಸೋಮುವಾರ ಹಳ್ಳದ ನೀರು ವೀಕ್ಷಣೆ ಮಾಡಿದರು.
ಬಳಿಕ ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರು ಹಳ್ಳದಲ್ಲಿ ನೀರು ದುರ್ವಾಸನೆ ಬರುತ್ತಿವೆ. ಮೀನುಗಳು ಸಾವುಗೊಂಡಿವೆ.ಇದರಿಂದ ಆತಂಕ ಶುರುವಾಗಿದೆ.ಹೀಗೆ ಬಿಟ್ಟರೆ ದನ ಕರುಗಳು ಸತ್ತು ಹೋಗುತ್ತವೆ.ಹೀಗಾಗಿ ಇ ನೀರಿನ ಬಗ್ಗೆ ಕೂಡಲೇ ಸೂಕ್ತವಾದ ಮಾಹಿತಿ ಒದಗಿಸಿ ಒತ್ತಾಯಿಸಿದರು.
ಸ್ಥಳದ್ದಲ್ಲೇ ಹಳ್ಳದ ನೀರನ್ನು ತೆಗೆದುಕೊಂಡು PH ಎಂಬ ಪರೀಕ್ಷೆ ಮಾಡಿ ನೀರಿನಲ್ಲಿ ಯಾವುದೇ ರೀತಿಯ ಕೆಮಿಕಲ್ ಮಿಶ್ರಣ ಕಂಡುಬಂದಿಲ್ಲ,ಚರಂಡಿಯಲ್ಲಿನ ಕೊಳಕು ನೀರು ನಾಲದಲ್ಲಿ ಬಂದ್ರೆ ಹೀಗಾಗುತ್ತೆ.ಇನ್ನೂ ಹೆಚ್ಚಿನ ಪರೀಕ್ಷೆಗಾಗಿ ನೀರನ್ನು ಪ್ರಯೋಗಲಾಯಕ್ಕೆ ಕಳುಹಿಸಲಾಗುತ್ತದೆ.ಆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹಾಯಕ ಪರಿಸರ ಅಧಿಕಾರಿ ಭಾಸ್ಕರ್ ಹೇಳಿದರು.
ಆದರೆ ಅಧಿಕಾರಿಗಳ ಮಾತಿಗೆ ಅನುಮಾನ ವ್ಯಕ್ತಪಡಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಂಬಮ್ಮಾ,ಉಪಾಧ್ಯಕ್ಷರಾದ ಎಂಡಿ ಸಿದ್ದಿಕ್, ಮಾಜಿ ಅಧ್ಯಕ್ಷ ಆನಂದ ಸೈನಿರ್ ಹೇಳಿದ್ದು ಹೀಗೆ…ಈ ಸಂದರ್ಭದಲ್ಲಿ ರಾಜಕುಮಾರ್ ಮಾಶಟ್ಟಿ,ಪ್ರಭು ಮಾಳನಾಯಕ್,ಸೈಯದ್ ಮುಜಿಬ್,ಎಂಡಿ ಜಿಲಾನಿ,ಮೋಹನ್ ಬಿರನ್ನಳ್ಳಿ,ಅಕ್ಬರ್ ಗಾಲಿಬ್, ಪ್ರಕಾಶ್ ಸಿದ್ದಣ,ಶಿವರಾಜ ವಾಡೇಕರ್,ಮುಜಿಬ್ ಎಲಗಾರ್ ಇದ್ದರು.
ವರದಿ:- ಸಜೀಶ ಲಂಬುನೋರ್