Ad imageAd image

ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ,ಗುರುತಿನ ಚೀಟಿ ವಿತರಣೆ.

Bharath Vaibhav
ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ,ಗುರುತಿನ ಚೀಟಿ ವಿತರಣೆ.
WhatsApp Group Join Now
Telegram Group Join Now

ಮೊಳಕಾಲ್ಮುರು :- ಜನ ಸೇವೆಯೇ ಜನಾರ್ದನ ಸೇವೆ ಎಂದು ಸಮಾಜದಲ್ಲಿ ಕಷ್ಟದಿಂದ ಇರುವ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ಎಂದು ವಿಜಿಯ ಮಹಾಂತೇಶ್ವರ ಶಾಖ ಮಠದ ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದರು.ಪಟ್ಟಣದಲ್ಲಿ ಬುಧುವಾರ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಸದಸ್ಯರ ಪದಗ್ರಹಣ ಮತ್ತು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯು ಕೂಡ ಸಮಾಜದಲ್ಲಿ ಬುದ್ಧ ಬಸವನವರು 12ನೇ ಶತಮಾನದಲ್ಲಿ ಬಸವಣ್ಣನವರು ಧಾರ್ಮಿಕವಾಗಿ ಶೈಶ್ವರ್ಣವಾಗಿ ಸಾಮಾಜಿಕವಾಗಿ ಉತ್ತಮ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು.12ನೇ ಶತಮಾನದಲ್ಲಿ ಎಲ್ಲರೂ ಕಾಯಕ ಮಾಡಿ ಈಗಿನ ಬದಲಾವಣೆಯ ಎಲ್ಲಾ ತದ್ವಿರುದ್ಧವಾಗಿದೆ.ಆದ್ದರಿಂದ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಸದಸ್ಯರುಗಳು ಸಮಾಜದಲ್ಲಿ ಉತ್ತಮವಾಗಿ ಬೆಳೆಯಬೇಕು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಕಷ್ಟದಲ್ಲಿ ಸಹಾಯ ಮಾಡಬೇಕು ಎಂದರು.

ಅದೇ ರೀತಿ ಗಗನಗಿರಿ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ನಾನು ಈ ಸಂಘದ ಸದಸ್ಯರಿಗೆ ಹೇಳುವುದೇನೆಂದರೆ ಎಲ್ಲಾ ಸಂಘದ ತರಹ ನೀವು ಕೂಡ ದುಡ್ಡಿನ ವ್ಯಾಮೋಹಕ್ಕೆ ಬೀಳಬಾರದು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ನಾವು ಈ ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಈ ದೇಶದ ಋಣ ತೀರಿಸಬೇಕು ಎಂದು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಸನ್ಮಾನ ಕೂಡ ಮಾಡಲಾಯಿತು.

ಈ ಸಂದರ್ಭದಲ್ಲಿ ಧನಂಜಯ ಜಿ ರಾಜ್ಯ ಜಂಟಿ ಕಾರ್ಯದರ್ಶಿಗಳು ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ ಎನ್ ಗಂಗಾಧರ ಪ್ರಕಾಶ್ ಕಾಡಪ್ಪ ಹೊನ್ನೂರ ಸ್ವಾಮಿ ಮಂಜುನಾಥ್ ಹೊನ್ನಪ್ಪ ವೆಂಕಟೇಶ್ ಆನಂದ್ ಓಬಳೇಶ್, ಲಿಂಗ ರೆಡ್ಡಿ ಅಜಯ್ ಕುಮಾರ್ ರುದ್ರಮುನಿಯಪ್ಪ ಹುಲಿಯಪ್ಪ  ವಿಜಿ ಕುಮಾರ್ ಶ್ರೀಕಾಂತ್ ದರ್ಶನ್ ನಟರಾಜ್ ನಾಗರಾಜ್ ಎರಿಸ್ವಾಮಿ ಇನ್ನು ಹಲವರು ಉಪಸ್ಥಿತರಿದ್ದರು ತಾಲೂಕ ಅಧ್ಯಕ್ಷರು.

ವರದಿ :-ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!