ಚಿಕ್ಕೋಡಿ: –ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ ಮುಡಾ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕೆಂದು ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ಆಗ್ರಹಿಸಿದ್ದಾರೆ.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದ ಬಂದಾಗಿನಿಂದಲೂ ಪ್ರತಿಯೊಂದು ಇಲಾಖೆಯೂ ಸಹ ಭ್ರಷ್ಟಾಚಾರವು ತಾಂಡವ ಆಡುತ್ತಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ಸ್ವಂತ ಸಿದ್ದರಾಮಯ್ಯ ಅಲ್ಲಿನ ಅಧ್ಯಕ್ಷ ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ತಮ್ಮ ಪತ್ನಿಯ ಹೆಸರಿನ ನಿವೇಶನಗಳನ್ನು ಬೇರೆ ಕಡೆ ಹಂಚಿಕೆ ಮಾಡಿರುತ್ತಾರೆ.ಈ ಹಿನ್ನಲೆಯಲ್ಲಿ ಈ ಭ್ರಷ್ಟಾಚಾರವನ್ನು ಖಂಡಿಸಿ ಬಿಜೆಪಿಯು ಪ್ರತಿಭಟನೆಯನ್ನು ನಟಿಸುತ್ತಿದೆ.
ಈ ಪ್ರಕರಣದಲ್ಲಿ ನಾಲ್ಕು ಸಾವಿರಕ್ಕಿಂತ ಕೋಟಿಗಿಂತ ಹೆಚ್ಚು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಸಿಎಂ ಸಿದ್ದರಾಮಯ್ಯ ಕೋಟ್ಯಾಂತರ ಹಣವನ್ನು ಮಾಡಿ ಸಣ್ಣ ಮೊತ್ತವನ್ನು ಸುನಿಯಾ ಗಾಂಧಿಯವರಿಗೆ ಕೊಟ್ಟಿರುತ್ತಾರೆ. ಇದಕ್ಕೆಲ್ಲ ತೆಪ್ಪೆ ಹಾಕುವಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ತನಿಖಾ ಅಧಿಕಾರಿಗಳನ್ನಾಗಿ ನೇಮಿಸಿ ಜನರ ಕಣ್ಣಿಗೆ ಬೂದಿ ಎರಚಲು ಹೊರಟಿದ್ದಾರೆ. ಸರಿಯಾದ ಸತ್ಯ ಹೊರ ಬರಬೇಕಾದರೆ ಒಬ್ಬ ನಿಷ್ಪಕ್ಷಪಾತವಾಗಿರುವಂತಹ ಹಿರಿಯ ನ್ಯಾಯಾಧೀಶರ ಅಡಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಸಚಿವ ಭೈರತಿ ಸುರೇಶ ಹಾಗೂ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಬೈಟ್: ಸತೀಶ ಅಪ್ಪಾಜಿಗೋಳ ಚಿಕ್ಕೋಡಿ ಬಿಜಿಪಿ ಜಿಲ್ಲಾಧ್ಯಕ್ಷ ,ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷ್ಯೆ ಶಾಂಭವಿ ಅಶ್ವತಪೂರ,ಅಭಯ ಮಾನ್ವಿ,ಅಪ್ಪಾಸಾಹೇಬ ಚೌಗಲಾ,ರಾಜು ಹರಗನ್ನವರ,ಅಮೃತ ಕುಲಕರ್ಣಿ ,ಸಂಜು ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ :-ರಾಜು ಮುಂಡೆ