ಬೆಂಗಳೂರು : ಬೆಂಗಳೂರಿನ ಶಾಂತಿನಗರದ ಬಸ್ ನಿಲ್ದಾಣದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿಯೇ ಸಿಬ್ಬಂದಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಸ್ ನಿಲ್ದಾಣದ ಮೂರನೇ ಮಹಡಿಯ ಕಚೇರಿಯಲ್ಲಿ ಸಿಬ್ಬಂದಿ ಮಹೇಶ್(42) ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ಏನು ಎಂದು ತಿಳಿದುಬಂದಿಲ್ಲ.
ಆತ್ಮಹತ್ಯೆ ಮಾಡಿಕೊಂಡ ಮಹೇಶ್ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ಮೂಲದವರು ಎಂದು ತಿಳಿದುಬಂದಿದೆ. ಬೆಂಗಳೂರಿನ ಇಡಿ ಕಚೇರಿ ಪಕ್ಕದಲ್ಲಿರುವ ಬಿಎಂಟಿಸಿ ಕಚೇರಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ.ನೆನ್ನೆ ಬೆಳಿಗ್ಗೆ ಸೆಲ್ಯೂರಿಟಿ ಗಾರ್ಡ್ ಹತ್ತಿರ ರೆಕಾರ್ಡ್ಸ್ ರೂಮಿನ ಕೀಯನ್ನು ಪಡೆದುಕೊಂಡಿದ್ದರು.
ನಿನ್ನೆ ಬೆಳಿಗ್ಗೆಯಿಂದ ಮಹೇಶ್ ಅವರು ರೆಕಾರ್ಡ್ಸ್ ರೂಮ್ನಲ್ಲಿಯೇ ಓಡಾಡಿದ್ದರು. ನಿನ್ನೆ ಸಂಜೆ ಯಾರು ಇಲ್ಲದ ವೇಳೆ ಮಹೇಶ್ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮಹೇಶ್ ಆತ್ಮಹತ್ಯೆ ಕುರಿತಂತೆ ಅವರ ಕುಟುಂಬ ಸದಸ್ಯರಿಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ.