ಚಿಕ್ಕೋಡಿ :ಬೆಳಗಾವಿ ಏಡಿಸ್ನಲ್ ಎಸ ಪಿಗಳಾದ ಶ್ರೀ ರಾಮಗೌಡ ಬಸ್ಸರಗಿ ಅವರು ನಮ್ಮ ವಾಹಿನಿಯೊಂದಿಗೆ ಸುದ್ದಿಗೋಷ್ಠಿ ನಡೆಸಿ ದ್ವಿಚಕ್ರ ವಾಹನ ಚಲಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಹಾಗೂ ಹೆಚ್ಚು ಅವಸರದಿಂದ ಚಲಾಯಿಸಬಾರದು ರಸ್ತೆಗಳು ಸರಿಯಾಗಿಇಲ್ಲದ ಕಾರಣ ಅಪಘಾತ ಆಗುವ ಸಂಭವಗಳಿವೆ ಮತ್ತು ಎಲ್ಲಾ ಡಾಕ್ಯುಮೆಂಟ್ಸ್ ಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು.
ಫೋರ್ ವೀಲರ್ ವಾಹನ ಚಲಿಸುವವರು ಸೀಟ್ ಬೆಲ್ಟ್ ಕಡ್ಡಾಯವಾಗಿ ಹಾಕಬೇಕು ಸ್ಪೀಡ್ ಕಮ್ಮಿಯಾಗಿ ಚಲಿಸಬೇಕು.ಇನ್ನು ಸಣ್ಣ ವಯಸ್ಸಿನಲ್ಲಿ ಅಂದರೆ 18ರ ಒಳಗಡೆ ಮಕ್ಕಳು ಮೋಟರ್ ಸೈಕಲ್ ಗಳನ್ನು ಚಲಾಯಿಸಬಾರದು ಮಕ್ಕಳ ಬಳಿ ವಾಹನಗಳನ್ನು ಕೊಡಬಾರದು ಕೊಟ್ಟಲ್ಲಿ ಇದಕ್ಕೆ ಸಂಬಂಧಪಟ್ಟ ಪೇರೆಂಟ್ಸಗಳು ಅಪರಾಧಿಗಳಾಗುತ್ತಾರೆ ಇನ್ನೊಂದು ಮಕ್ಕಳಿಗೆ ಸರಿಯಾಗಿ ಚಲಾಯಿಸಲು ಬರುವುದಿಲ್ಲ ಆದ ಕಾರಣ ಅಪಘಾತಕ್ಕೆ ಒಳಗಾಗಿ ಜೀವವನ್ನು ಹಾನಿ ಮಾಡಿಕೊಳ್ಳುತ್ತಾರೆ ಹಾಗಾಗಿ ಮಕ್ಕಳ ಬಳಿ ಗಾಡಿಗಳನ್ನು ಕೊಡಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಡಿ ವೈ ಎಸ್ ಪಿ ಶ್ರೀ ಗೋಪಾಲಕೃಷ್ಣ ಗೌಡರ್,ಚಿಕ್ಕೋಡಿ ಸಿ ಪಿ ಐ ಶ್ರೀ ವಿಶ್ವನಾಥ್ ಚೌಗುಲೆ,ಚಿಕ್ಕೋಡಿ ಪಿ ಎಸ್ ಐ ಶ್ರೀ ಬಿ ಎಸ್ ನೆರಲಿ,ಚಿಕ್ಕೋಡಿ ಸ್ಟೇಷನ್ ಸಿಬ್ಬಂದಿಗಳಾದ ಎ ಎಮ್ ಮಂಡಿಗೇರಿ, ಕೆ ಎಮ್ ಬಳೋಲಮಟ್ಟಿ, ಕೆ ಬಿ ಸಂಕ್ರಟ್ಟಿ,ಆರ್ ಆರ್ ಕರಿಗಾರ್, ಟಿಎಲ್ ಕಾಂಬಳೆ, ಪಿಎಸ್ ನಾಯಿಕ,ಮತ್ತು ಚಿಕ್ಕೋಡಿ ಪೊಲೀಸ್ ಸ್ಟೇಷನ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ