ಹಾವೇರಿ:- ಹೊಸೂರ್ ಯತ್ನಳ್ಳಿ ಗ್ರಾಮದ ಗುರಪ್ಪ ಶಿವಪ್ಪ ಅದರಗುಂಚಿ ಇವರು ವಾಸಮಾಡುವ ಮನೆಯು ದಾರಾಕಾರ ಮಳೆಯಿoದ ಸಂಪೂರ್ಣ ನೀರು ನುಗ್ಗಿ ಮನೇ ಗೋಡೆ ಬಿದ್ದು ಜೀವ ಹಾನಿ ಆಗುವ ಲಕ್ಷಣ ಕಂಡುಬಂದಿದ್ದು,ತಕ್ಷಣ ಎಚ್ಚತ್ತುಕೊಂಡ ಸ್ಥಳಿಯ ಗ್ರಾಮ ಲೆಕ್ಕಾಅಧಿಕಾರಿಗಳಾದ ಮೇಘಾ ಹಾಗೂ ಅಂಗನವಾಡಿ ಶಿಶು ಅಭಿರುದ್ದಿ ಯೋಜನಾ ಅಧಿಕಾರಿ ಗಣೇಶ್ ಆರ್ ನಿಂಗನಗೌಡ್ರ ಸ್ಥಳಕ್ಕೆ ಧಾವಿಸಿ ಆ ಮನೆಯಲ್ಲಿ ಸಿಲುಕಿದ್ದ
ಬಡ ಕುಟುಂಬಕ್ಕೆ ಎತ್ನಳ್ಳಿ ಅಂಗನವಾಡಿ ಕೇಂದ್ರದಲ್ಲಿ ಇರುವುದಕ್ಕೆ ಅವಕಾಶ ಮಾಡಿಕೊಟ್ಟು ಏಳು ಜನರ ಪ್ರಾಣ ರಕ್ಷಿಸಿದ್ದಾರೆಂದು ತಿಳಿದು ಬಂದಿದೆ.
ಈ ಕುಟುಂಬಕ್ಕೆ 2021-2022ನೇ ಸಾಲಿನಲ್ಲಿ ನೇರೆ ಹಾವಳಿಯಿoದ ಹಾನಿಯಾದ ಮನೆಗಳಿಗೆ ಐದು ಲಕ್ಷ ರೂಪಾಯಿಯ ಮನೆ ಮಂಜೂರು ಮಾಡಬೇಕೆಂದು ಇಂಜೀನಿಯರ 100% ಕ್ಕೆ 100% ಹಾನಿಗೆ ಒಳಗಾದ ಮನೆಯೆಂದು ಗುರುತು ಮಾಡಿದರು ಸಹ ಅವರಿಗೆ ಮನೆ ಮಂಜೂರು ಮಾಡಿಲ್ಲಾ ಇದರ ಕುರಿತು ಯಾಕೆ ಮಂಜೂರು ಮಾಡಿಲ್ಲಾ ಎಂದು ಮನೆಯ ಯಜಮಾನರಾಗಿರುವ ಗುರಪ್ಪ ಶಿವಪ್ಪ ಅದರಗುoಚ್ಚಿ ತಮ್ಮಕಷ್ಟಗಳನ್ನು ತೋಡಿಕೊಂಡರು.
ಈ ಎಲ್ಲ ಕಷ್ಟಗಳನ್ನು ಎದುರಿಸುತ್ತಿರುವ ಆ ಕುಟುಂಬಕ್ಕೆ ಸಂಭಂದ ಪಟ್ಟ ಅಧಿಕಾಕಾರಿಗಳು ಸರ್ಕಾರದಿಂದ ಪರಿಹಾರ ರೀತಿಯಲ್ಲಿ ಮನೆ ಮಂಜೂರು ಮಾಡಬೇಕೆಂದು ಗ್ರಾಮ ಪಂಚಾಯತ್ ಸದ್ಯಸೇರಾದ ಭಾಗ್ಯಶ್ರೀ ಅರುಣ್ ಇಂದೂರ ಮತ್ತು ನಾಗರಾಜ ಸುರಗೊಂಡರವರು ಸರ್ಕಾರಕ್ಕೆ ಒತ್ತಾಯ ಮಾಡಿದರು.ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಬೇಕೆಂದು ಗ್ರಾಮಸ್ಥರೂ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವರದಿ. ರಮೇಶ ತಾಳಿಕೋಟಿ