ಹುಬ್ಬಳ್ಳಿ:– ಹದಗೆಟ್ಟ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಜು ನಾಯಕವಾಡಿ ಆಗ್ರಹಿಸಿದ್ದಾರೆ.ಸ್ಮಾರ್ಟ್ ಸಿಟಿ ಹಣೆಪಟ್ಟಿ ಹೊತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಾಮಗಾರಿ ನಡೆಯುತ್ತಿದೆ. ಆದರೆ ಅವುಗಳು ಯಾವುವು ಗುಣಮಟ್ಟದಲ್ಲಿ ಇಲ್ಲ ಎಂಬ ಆರೋಪಗಳಿವೆ. ಈ ನಡುವೆ ಹುಬ್ಬಳ್ಳಿಯ ಹದಗೆಟ್ಟ ರಸ್ತೆಗಳಿಂದ ಜನರು ರೋಸಿ ಹೋಗಿದ್ದಾರೆ. ಇದೀಗ ಮಳೆಗಾಲ ಬೇರೆ ಜನರ ಸಮಸ್ಯೆ ಹೇಳತ್ತಿರದಾಗಿದೆ. ಇಲ್ಲಿನ ವಾರ್ಡ್ ನಂಬರ್ ೫೧ ರಲ್ಲಿನ ಜೇನ್ಸ್ ಸ್ಕೂಲ್ ಹತ್ತಿರದ ಆರ್.ಎನ್.ಶೆಟ್ಟಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪರಿಣಾಮ ವಾಹನ ಸಂಚಾರರು ನರಕಯಾತನೆ ಅನುಭವಿಸುತ್ತಾ ಓಡಾಟ ನಡೆಸಬೇಕಿತ್ತು. ಇಷ್ಟಾದರೂ ಇಲ್ಲಿನ ಪಾಲಿಕೆ ಸದಸ್ಯರಾಗಲಿ, ಶಾಸಕರಾಗಲಿ, ಸಂಸದರಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಲಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರ ರಸ್ತೆ ಕಾಮಗಾರಿ ಆರಂಭಿಸಬೇಕೆಂದು ೩ ದಿನ ಗಡವು ನೀಡಿದ್ದೆ. ಇಲ್ಲವಾದಲ್ಲಿ ಸ್ವಂತ ಹಣದಿಂದ ರಸ್ತೆ ಮಾಡಬೇಕಾತ್ತದೆ. ಮುಂದಿನ ದಿನಗಳಲ್ಲಿ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಇದೀಗ ಪಾಲಿಕೆ ಆಯುಕ್ತರು ಸ್ಪಂದಿಸಿದ್ದು, ಇಂದಿನಿಂದ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ. ಮಾತಿಗೆ ಸ್ಪಂದಿಸಿ, ಜನರ ಕಷ್ಟಆಗ್ರಹಿಸುತ್ತೇನೆ ಂದಾದ ಪಾಲಿಕೆ ಆಯುಕ್ತರಿಗೆ ವಾರ್ಡ್ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ೮೨ ವಾರ್ಡ’ಗಳಲ್ಲಿ ಇಂತಹ ಸಮಸ್ಯೆ ಹೆಚ್ಚಿದ್ದು, ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಈ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸುತ್ತೇನೆ.
ವರದಿ:-ಸುಧೀರ್ ಕುಲಕರ್ಣಿ