Ad imageAd image

ನನ್ನನ್ನು ನೋಡಲು ಯಾರೂ ಬರಬೇಡಿ : ಜೈಲಿನಿಂದಲೇ ನಟ ದರ್ಶನ್ ಮನವಿ 

Bharath Vaibhav
ನನ್ನನ್ನು ನೋಡಲು ಯಾರೂ ಬರಬೇಡಿ : ಜೈಲಿನಿಂದಲೇ ನಟ ದರ್ಶನ್ ಮನವಿ 
case
WhatsApp Group Join Now
Telegram Group Join Now

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಇದೀಗ ತಮ್ಮ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದು, ತಮ್ಮನ್ನು ನೋಡಲು ಜೈಲಿಗೆ ಯಾರು ಬರಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಜೈಲುಪಾಲಾಗಿರುವ ನಟ ದರ್ಶನ್‌ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪರಪ್ಪನ ಅಗ್ರಹರ ಜೈಲಿಗೆ ಆಗಮಿಸುತ್ತಿದ್ದು, ಇದರಿಂದ ಮುಜುಗರಕ್ಕೀಡಾಗಿರುವ ನಟ ದರ್ಶನ್‌ ನನ್ನನ್ನು ನೋಡಲು ಯಾರೂ ಜೈಲಿನ ಬಳಿ ಬರಬೇಡಿ. ಎಲ್ಲರೂ ಶಾಂತ ರೀತಿಯಿಂದ ವರ್ತಿಸಿ ಎಂದು ಮನವಿ ಮಾಡಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವಂತ ನಟ ದರ್ಶನ್ ಅವರು, ತಮಗೆ ಜೈಲೂಟ ಬೇಡ, ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೇ ಕೋರ್ಟ್ ವಾದ- ಪ್ರತಿವಾದವನ್ನು ಆಲಿಸಿದ ನಂತ್ರ, ತೀರ್ಪನ್ನು ಜುಲೈ.25ಕ್ಕೆ ಕಾಯ್ದಿರಿಸಿತ್ತು.ಈ ಅರ್ಜಿಯ ವಿಚಾರಣೆಯನ್ನು ಇಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಸಿತು. ಅಂತಿಮವಾಗಿ ಮನೆಯೂಟದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!