Ad imageAd image

ಪವರ್ ಜೋತೆ ಕತ೯ವ್ಯ ನಿವ೯ಹಿಸುವ ಪವರ್ ಮ್ಯಾನ್ ಗಳಿಗೆ ಇಲ್ಲ ರಕ್ಷಣೆ ಕವಚ :- ಕೃಷ್ಣ ಚಲುವಾದಿ.

Bharath Vaibhav
ಪವರ್ ಜೋತೆ ಕತ೯ವ್ಯ ನಿವ೯ಹಿಸುವ ಪವರ್ ಮ್ಯಾನ್ ಗಳಿಗೆ ಇಲ್ಲ ರಕ್ಷಣೆ ಕವಚ :- ಕೃಷ್ಣ ಚಲುವಾದಿ.
WhatsApp Group Join Now
Telegram Group Join Now

ಮುದಗಲ್ಲ :- ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕಾಯುವ ಯೋಧರಂತೆ ನಮ್ಮಲೈನ್ ಮ್ಯಾನ್ ಗಳು, ಸಾರ್ವಜನಿಕ ವಲಯ ಗಳಲ್ಲಾಗಲೀ,ಯಾವುದೇ ಮಾಧ್ಯಮಗಳಲ್ಲಾಗಲೀ ಇವರ ಸೇವೆಯನ್ನು ಗುರುತಿಸಿಶ್ಲಾಘಿಸುವ ಕಾರ್ಯ ಬಹಳ ವಿರಳ. ಆದರೆ ಬೀದಿ ದೀಪದಿಂದಹಿಡಿದು ಆಸ್ಪತ್ರೆಯ ಲೈಟ್ ವರೆಗೂ, ಪ್ರತಿ ಮನೆಯಿಂದ ಹಿಡಿದುದೊಡ್ಡ ದೊಡ್ಡ ಕಾರ್ಖಾನೆಗಳ ಬಳಕೆಗೂ ಯಾವುದೇ ಹೊಗಳಿಕೆ ಯನ್ನು ನಿರೀಕ್ಷೆಸದೆ ವಿದ್ಯುತ್ ಹರಿಸುವ ಕೆಲಸವನ್ನುಲೈನ್ ಮ್ಯಾನ್ ಗಳು ಹಗಲುರಾತ್ರಿಯೆನ್ನದೆ ಜೀವದ ಹಂಗುತೊರೆದು ಕಾರ್ಯ ನಿರ್ವಹಿಸುತ್ತಾರೆ.

ಅದರಲ್ಲೂ ಮಳೆಗಾಲದ ಇವರ ಕೆಲಸ ಪ್ರತಿಕ್ಷಣಕ್ಕೂ ಜೀವವನ್ನು ಪಣಕ್ಕಿಟ್ಟಂತೆ ಕೆಲವು ಗಂಟೆ ಅಥವಾ ಒಂದೆರಡು ದಿನಗಳ ವಿದ್ಯುತ್ವ್ಯ ತ್ಯಯಕ್ಕೆ ಹೊಂದಿಕೊಳ್ಳಲಾಗದೆ ವಿದ್ಯುತ್ ನಿಗಮದವರನ್ನುನಾವು ಶಪಿಸಲಾರಂಭಿಸುತ್ತೇವೆ.ಆದರೆ ಸುರಿಯುವ ಮಳೆಯಲ್ಲಿ ಒದ್ದೆಯಾದ ವಿದ್ಯುತ್ ಕಂಬಗಳ ಮೇಲೇರಿ ತಂತಿಗಳ ಮರುಜೋಡಣೆ ಮಾಡುವುದು ನಿಜಕ್ಕೂ ಸಾಹಸವೇ ಸರಿ. ಕೆಲವೊಮ್ಮೆಟ್ರಾನ್ಸ್ ಫಾರ್ಮರ್ ಗಳಲ್ಲಿನ ಅಥವಾ ಮುಖ್ಯ ಘಟಕಗಳಲ್ಲಿ ನಕನೆಕ್ಷನ್ ತಪ್ಪಿಸಿದರೂ ಕೂಡ ಶಾರ್ಟ್ ಸರ್ಕ್ಯೂಟ್ ನಿಂದ ಹಲವಾರುಲೈನ್ ಮ್ಯಾನ್ ಗಳು ತಮ್ಮ ಪ್ರಾಣವನ್ನು ತೆತ್ತಿದ್ದಾರೆ.

ಇತರರ ಮನೆದೀಪ ಬೆಳಗಿಸಲು ಪ್ರಯತ್ನಿಸುವ ಲೈನ್ ಮ್ಯಾನ್ ಗಳು ಸದಾ ಹೈ್ಟವೋಲ್ವೇಜ್ ವೈರ್ ಗಳ ನಡುವೆ ಕೆಲಸ ಮಾಡುತ್ತಾ ಎಷ್ಟೋ ಬಾರಿತಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಲೈನ್ ಮ್ಯಾನ್ ಗಳುಪ್ರಾಣ ತೆರುವುದು ಎಷ್ಟು ನ್ಯಾಯ ಲೈನ ಮ್ಯಾನಗಳಿಗೆ ರಕ್ಷಣೆ ಕವಚ ನೀಡದೆ ಅವರನ್ನು ಕೆಲಸಕ್ಕೆ ಕಳಿಸುತ್ತಿರುವುದು ಅಪರಾಧವಾಗಿದೆ ಲೈನ್ ಮ್ಯಾನ್ ಗಳಿಗೆ ಕೈ ಗೆ ಗ್ಲೋಸ್ ,ಶೂಗಳು, ರೈನ್ ಜಾಕೆಟ್, ಎಲ್ಮೆಂಟ್ ,ಮತ್ತು ಇತ್ಯಾದಿ ಸಾಮಗ್ರಿಗಳು ನೀಡಬೇಕೆಂನೆಂದುಎಂದು ಮಾಜಿ ಗುಲ್ಬರ್ಗ ವಿದ್ಯುತ್ ಸರಬರಾಜು ಸಲಹ ಸಮಿತಿಯ ಸದಸ್ಯ ರಾದ ಕೃಷ್ಣ ಚಲುವಾದಿ ಆರೋಪ ಮಾಡಿದರು.

ಹೌದು ಲಿಂಗಸೂಗೂರ ತಾಲ್ಲೂಕಿನಲ್ಲಿ ಗುಲ್ಬರ್ಗ ವಿದ್ಯುತ್ ಸರಬರಾಜು ಇಲಾಖೆಯಲ್ಲಿ ಕಾರ್ಯ ನಿರ್ವಯಿಸುವ ಲೈನ್ ಮ್ಯಾನಗಳಿಗೆ ಜೀವಕ್ಕೆ ಯಾವುದೇ ರಕ್ಷಣೆ ಇಲ್ಲದಂತೆವಾಗಿದೆ ಯಾಕೆಂದರೆ ಮುದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾರ್ಯನಿರ್ವಸಿತ್ತಿರುವ ಗುಲ್ಬರ್ಗ ವಿದ್ಯುತ್ ಸರಬರಾಜು ಇಲಾಖೆಯಲ್ಲಿ ಲೈನ್ ಮ್ಯಾನ್ ಕಾರ್ಯನಿರ್ವಹಿಸುತ್ತಿರುವ ಲೈನ್ ಮ್ಯಾನಗಳ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ .ಮಳೆಗಾಲದಲ್ಲಿ ಯಾವುದೇ ಲೈನ್ ಮ್ಯಾನ್ ಗಳ ಜೀವಕ್ಕೆ ರಕ್ಷಣೆ ಕವಚ ಇಲ್ಲದೆ ಕಾರ್ಯ ನಿರ್ವಯಿಸುತ್ತಿದು ಅವರಿಗೆ ಸರ್ಕಾರದಿಂದ ಬರುವ ಯೋಜನೆಗಳು ಸಮರ್ಪಕವಾಗಿ ಲೈನ್ ಮ್ಯಾನ್ ಗಳಿಗೆ ನೀಡುತ್ತಿಲ್ಲ.

ಲೈನ್ ಮ್ಯಾನ್ ಜೀವಕ್ಕೆ ಯಾವುದೇ ಅಪಾಯವಾಗದನಂತೆ ರಕ್ಷಣೆ ಕವಚ ನೀಡಬೇಕು ಇದು ಸರ್ಕಾರದ ಆದೇಶ ಇದೆ ಆದರೆ ಇಲ್ಲಿರುವ ಗುಲ್ಬರ್ಗ ವಿದ್ಯುತ್ ಸರಬರಾಜು ಇಲಾಖೆಯ ವ್ಯವಸ್ಥಾಪಕರು ಸರಿಯಾಗಿ ಲೈನ ಮ್ಯಾನಗಳಿಗೆ ರಕ್ಷಣೆ ಕವಚ ನೀಡದೆ ಅವರನ್ನು ಕೆಲಸಕ್ಕೆ ಕಳಿಸುತ್ತಿರುವುದು ಅಪರಾಧವಾಗಿದೆ ಲೈನ್ ಮ್ಯಾನ್ ಗಳಿಗೆ ಕೈ ಗೆ ಗ್ಲೋಸ್ ಶೂ.ಗಳು, ರೈನ್ ಜಾಕೆಟ್,ಎಲ್ಮೆಂಟ್ ,ಮತ್ತು ಇತ್ಯಾದಿ ಸಾಮಗ್ರಿಗಳು ನೀಡಬೇಕೆಂನೆಂದು ಮಾಜಿ ಗುಲ್ಬರ್ಗ ವಿದ್ಯುತ್ ಸರಬರಾಜು ಸಲಹ ಸಮಿತಿ ಸದಸ್ಯರಾದ ಕೃಷ್ಣ ಚಲವಾದಿ ಆಗ್ರಹಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಲೈನ್ ಮ್ಯಾನ್ ಗಳಿಗೆ ಸೂಕ್ತವಾದ ರಕ್ಷಣಾ ಕವಚ ಹಾಗೂ ಅವರ ಜೀವಕ್ಕೆ ಯಾವುದೇ ರೀತಿಯ ಅಪಾಯ ಆಗದಂತೆ ನೋಡಿ ಕೊಳ್ಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ದೂರ ಸಲ್ಲಿಸಲಾಗುವುದು ಈ ಮೂಲಕ ಎಚ್ಚರಿಸಿದ್ದಾರೆ..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!