ಇಲಕಲ್: ಜೂಲೈ 25 ಗುರುವಾರ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಐಡಿಯಲ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇಲಕಲ್ಲ. 2024- 25 ನೇ ಸಾಲಿನ ಶಾಲಾ ಸಂಸತ್ತು ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಹೈದರ ಅಲಿ ಹಳ್ಳಿಯವರು ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದು ಅವಶ್ಯಕವಾಗಿದೆ. ಚುನಾವಣೆಯ ಮಹತ್ವ ಮತ್ತು ಮಂತ್ರಿಮಂಡಲದ ಜವಾಬ್ದಾರಿಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿದರು.
ದಾದೆಪೀರ್ ಹನಮಸಾಗರ
ಮುಖ್ಯ ಅತಿಥಿ ಸ್ಥಾನವನ್ನು ವಹಿಸಿರುವ ದಾದೆಪೀರ್ ಹನಮಸಾಗರ ಇವರು ಭಾವಿ ಭವಿಷ್ಯತ್ತಿನ ಪ್ರಜೆಗಳಾದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ವಿವಿಧ ಕ್ಷೇತ್ರಗಳ ವಿಷಯ ಮತ್ತು ಕಾರ್ಯವೈಖರಿ ಕುರಿತು ಪ್ರಜ್ಞೆ ಹೊಂದಿರಬೇಕು .ದೇಶದ ಪ್ರಥಮ ಚುನಾವಣೆ ಹೇಗೆ ಜರುಗಿತು ?ಎಂಬುದರ ಕುರಿತು ವಿಷಯ ಮನವರಿಸಿದರು.ವೇದಿಕೆ ಮೇಲೆ ಅತಿಥಿಗಳಾಗಿ ಶಬ್ಬೀರ್ ಸೋಫೆಘರ, ಮಹಮ್ಮದ್ ಹುಸೇನ್ ಬಾಗವಾನ, ಮಹಮ್ಮದ್ ರಫೀಕ್ ಐಹೊಳ್ಳಿ, ಅಲ್ತಾಫ್ ಹುಸೇನ್ ಪಟೇಲ್ ಉಪಸ್ಥಿತರಿದ್ದರು..
ನಿರೂಪಣೆ ಸಿಂಧೂ ಬದಾಮಿ, ಕಿರಾತ ಸುಹಾನಾ ಬಂಡಿ, ನಾತ್ ಯೂನೂಸ್ ಮಾಸಾಪತಿ, ಸ್ವಾಗತ ಅನೀಸ್ ಹವಾಲ್ದಾರ್, ಪ್ರಾಸ್ತಾವಿಕ ನುಡಿ ಶರಣು ಬಡಿಗೇರ್, ಪ್ರತಿಜ್ಞಾವಿಧಿ ಸದಾಮ್ ವಾಲಿಕಾರ್, ವಿದ್ಯಾರ್ಥಿಗಳ ಸದಸ್ಯತ್ವ ಬ್ಯಾಚ್ ಹಾಗೂ ಕಾಣಿಕೆ ಭಾಗ್ಯಾ ವಡಿಕೇರಿ ಮತ್ತು ಆಲಿಯಾ ಗಡಾದ , ವಂದನಾರ್ಪಣೆ ಶಬಾನಾ ಪುಣೆಕರ್ ವಹಿಸಿಕೊಂಡಿದ್ದರು ಎಂದು ಶಾಲೆಯ ಮುಖ್ಯ ಗುರುಮಾತೆಯರಾದ ಎಂ ಜಿ ಅಕ್ಕಲಕೋಟ್ (ಚೋಪದಾರ) ಇವರು ಪತ್ರಿಕೆಯವರಿಗೆ ತಿಳಿಸಿದರು.
ಶಾಲೆಯ ಸಂಸತ್ ಚುನಾವಣಾ ಪ್ರಮಾಣವಚನ :
ಪ್ರಧಾನಮಂತ್ರಿ:
ಮಹಮ್ಮದ್ ಅರಫಾ ಟಪಾಲ್ ಹಾಗೂ ಮೆಹತಾಬ್ ಕರ್ನೂಲ್.
ಉಪಪ್ರಧಾನ ಮಂತ್ರಿ :
ಯಾಕೂಬ ಕೆರೂರ್ ಹಾಗೂ
ಬಿಬಿ ಹಾಜರಾ ಐಹೊಳ್ಳಿ
ಸಾಂಸ್ಕೃತಿಕ ಮಂತ್ರಿ :
ಮುಜಮ್ಮಿಲ್ ಗ್ವಾತಗಿ ಹಾಗೂ ಸುಮಯ್ಯ ಗ್ವಾತಗಿ
ಪರೀಕ್ಷೆ / ಶಿಕ್ಷಣ ಮಂತ್ರಿ :
ತೌಕೀರ್ ದಫೇದಾರ್ ಹಾಗೂ
ಜಿಕ್ರಾ ಗೋಡೆಕರ್
ಆರೋಗ್ಯ ಮತ್ತು ಶಿಸ್ತಿನ ಮಂತ್ರಿ :
ಅಬರಾರ್ ಕಲಬುರ್ಗಿ ಹಾಗೂ
ಆಸಿಯಾ ಕರ್ನೂಲ್
ಕ್ರೀಡಾ ಮಂತ್ರಿ :
ಐತಶಾಮ್ ಹನುಮಸಾಗರ ಹಾಗೂ ಸಬಿಯಾತರನ್ನುಮ ಗೊಬ್ಬಿ
ಪ್ರವಾಸ ಮಂತ್ರಿ:
ಉಮರ್ ಫಾರೂಕ್ ಕಂಕರ್ ಹಾಗೂ ಸಾಧನಾ ಕೆ ಎಂ..
ವರದಿ : ದಾವಲ್ ಶೇಡಂ