ಹಾವೇರಿ:ಹೌದು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನಲ್ಲಿ ಪ್ರಾಚೀನ ಇತಿಹಾಸವುಳ್ಳ ಸುಪ್ರಸಿದ್ಧ ನಾಗನೂರು ಕೆರೆಗೆ ಬಾಗೀನ ಅರ್ಪಣೆ ಮಾಡಲಾಯಿತು.ಹಾವೇರಿ ಜಿಲ್ಲೆಯಾದ್ಯಂತ ಆಗುತ್ತಿರುವ ನಿರಂತರ ಮಳೆಯಿಂದಾಗಿ ಪಟ್ಟಣದ ನಾಗನೂರು ಕೆರೆಯು ಮೈದುಂಬಿದ್ದು ಇದರ ರಮಣೀಯ ದೃಶ್ಯ ನೋಡಲು ಜಿಲ್ಲೆಯಾದ್ಯಂತ ಅನೇಕ ಪ್ರೇಕ್ಷಕರು ಬರುತ್ತಿದ್ದು ಇದೇ ಸಂದರ್ಭದಲ್ಲಿ ಎಂಕೆಬಿಎಸ್ಎಸ್ ಶಾಲೆಯ ಮಾಜಿ ಅಧ್ಯಕ್ಷರಾದ ಶ್ರೀ ಮತಿ ರತ್ನಮ್ಮ ಬಸವರಾಜ ಕಮ್ಮಾರ ಅವರು ಭಾಗಿನ ಅರ್ಪಣೆ ಮಾಡಿದರು.
ಈ ಕೆರೆಯು ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ನಿರ್ಮಿಸಿರುವ ಕೆರೆ ಆಗಿದ್ದು ಪ್ರಸಿದ್ಧ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ಕಳೆದ ಸುಮಾರು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿತ್ತು.
ಈ ವರ್ಷದಲ್ಲಿ ರಾಜ್ಯಾದೆಂತ ವರುಣನ ಆರ್ಭಟದಿಂದ ಕೆರೆಯು ಸಂಪೂರ್ಣ ತುಂಬಿದ್ದು ಕಂಡುಬಂದಿದೆ.
ಶಿಗ್ಗಾಂವಿಯಾದ್ಯoತ ಇದೆ ನಾಗನೂರು ಕೆರೆಯ ನೀರು ಸರಬರಾಜು ಆಗುತಿದ್ದು ಕಳೆದ ವರ್ಷದಿಂದ ನೀರಿನ ಪ್ರಮಾಣ ಕಡಿಮೆಯಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವರದಿ :ರಮೇಶ್ ತಾಳಿಕೋಟಿ