ಮಾನ್ವಿ:ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಣ ದಿನ್ನಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಸಂಖ್ಯೆ 116 ಇದರ ಮಾಲಿಕ ಮಲ್ಲಯ್ಯ ಜಾಲ ಪುರ ಈ ಪರವನಿಗೆ ಸಂಖ್ಯೆಯ ಮೇಲೆ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿದ್ದು ಮೂರು ಜನರಿಗೆ 15 ಕೆಜಿ ಅಕ್ಕಿ ಮತ್ತು ಜೋಳ ವಿತರಿಸಬೇಕಾಗಿದ್ದು ಸರಿಯಾದ ತೂಕದ ಯಂತ್ರದಿಂದ ತೂಕ ಮಾಡದೆ ಡಬ್ಬಿಗಳಿಂದ ಅಳತೆ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ನೇರ ಆರೋಪ ಮಾಡಿದ್ದಾರೆ ಒಬ್ಬ ಪಡಿತರದಾರರಿಗೆ ಸರ್ಕಾರ 3 ಕೆಜಿ ಅಕ್ಕಿ 2 ಕೆ.ಜಿ ಜೋಳ ಕೊಡಬೇಕೆಂಬ ಸರ್ಕಾರದ ನಿಯಮದ ಪ್ರಕಾರ ಹಂಚಿಕೆ ಮಾಡದೆ ಇವರು ತಮ್ಮ ಮನಸ್ಸಿಗೆ ಬಂದಂತೆ ಪಡಿತರದಾರರಿಗೆ 2 ಕೆಜಿ ಅಕ್ಕಿ1 ಕೆಜಿ ಜೋಳವನ್ನು ಮಾತ್ರ ಕೊಡು ಎಂದು ಪಡಿತರದಾರ ಮಹಾಕಾಳಿ ಗಂಡ ಹನುಮಂತಪ್ಪ ಇವರ ಕುಟುಂಬ ಸಂಖ್ಯೆ ಮೂರು ಜನರಿದ್ದರು ಇವರಿಗೆ 15 ಕೆಜಿ ಹಾಕಿದ್ದೇವೆ ಎಂದು ಮನೆಗೆ ಕಳಿಸಿರುತ್ತಾನೆ. ಸುಮಾರು ಪಡಿತರ ಕಾರ್ಡುದಾರರಿಗೆ ಇದೇ ರೀತಿಯಲ್ಲಿ ಡಬ್ಬಿಯಿಂದ ಅಳತೆ ಮಾಡಿ ಹಾಕಿ ಕಳಿಸುತ್ತಾರೆ ಅದನ್ನು ತೆಗೆದುಕೊಂಡು ಹೋಗಿ ತೂಕ ಯಂತ್ರದಲ್ಲಿ ತೂಕ ಮಾಡಿದಾಗ 11 ಕೆಜಿ ಮಾತ್ರ ಭಾರ ತೂಕ ತೋರಿಸುತ್ತದೆ ಈ ರೀತಿಯಲ್ಲಿ ಎಲ್ಲಾ ಕಾಡುದಾರರಿಗೆ ತೂಕದಲ್ಲಿ ಮೋಸ ಮಾಡುತ್ತಿದ್ದಾನೆ.
ಹಂಚಿಕೆ ಮಾಡುವಾಗ ತೂಕ ಮಾಡುವ ಯಂತ್ರದ ತಕ್ಕಡಿಯನ್ನು ಬಳಸದೆ ಡಬ್ಬಿಗಳಿಂದ ಅರ್ಧದಷ್ಟು ಹಾಕಿ ಪಡಿತದಾರರಿಗೆ ಮೋಸ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಮಾಲೀಕನನ್ನು ವಿಚಾರಿಸಿದರೆ ನೀವು
ತಾಹಶಿಲ್ಲ್ದಾರ್ ರವರಿಗೆ ಕಂಪ್ಲೇಂಟ್ ಕೊಡುತ್ತೀರೇನು ಕೋಡಿ ನಾನು ಅವನು ಬಂದರೆ ಅವನಿಗೆ ಉತ್ತರ ನೀಡುತ್ತೇನೆ ಎಂದು ಏಕವಚನದಲ್ಲಿ ತಾಲೂಕ ದಂಡ ಅಧಿಕಾರಿಗಳಿಗೆ ಮಾತನಾಡುತ್ತಿದ್ದಾನೆ. ಹಾಗಾಗಿ ಗ್ರಾಮಸ್ಥರು ರಾಯಚೂರು ಜಿಲ್ಲಾಧಿಕಾರಿಗಳಿಗೆ ಮತ್ತು ಮಾನ್ವಿ ತಹಶೀಲ್ದಾರರಿಗೆ. ಆಹಾರ ನಿಗಮ ಅಧಿಕಾರಿಗೆ.ಈ ನ್ಯಾಯ ಬೆಲೆ ಅಂಗಡಿಯ ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಮತ್ತು ಅರ್ಜಿಯನ್ನು ಸಲ್ಲಿಸಿ. ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ ಈಗಲಾದರೂ ಸಂಬಂಧಪಟ್ಟ ಆಹಾರ ಅಧಿಕಾರಿಗಳು ಗಣಿದಿನ್ನಿ ಗ್ರಾಮಕ್ಕೆ ಭೇಟಿ ನೀಡಿ ನ್ಯಾಯಬೆಲೆ ಪಡಿತರ ಕಾರ್ಡುದಾರರಿಗೆ ಮೋಸ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳನ್ನು ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ
ವರದಿ: ಗಾರಲದಿನ್ನಿ ವೀರನಗೌಡ