ಬಾದಾಮಿ : ಅಖಿಲ ಕರ್ನಾಟಕ ವೀರಕನ್ನಡಿಗ ಮಾಜಿ ಸೈನಿಕರ ಸಂಘ ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿಯಲ್ಲಿ, 28 ಮದ್ರಾಸ್ ರೆಜ್ಮೆಂಟ್ 49 ನೇ ರೈಜಿಂಗ್ ಡೇ ಹಾಗೂ
3rd ಸ್ನೇಹಸಮ್ಮೆಳನ ಕಾರ್ಯಕ್ರಮ ನಡೆಯಿತು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿಯ ಗಾಯತ್ರಿ ಸಮುದಾಯದ ಭವನದಲ್ಲಿ ಕಾರ್ಗಿಲ್ ವಿಜಯೋತ್ಸವ ನಿಮಿತ್ಯವಾಗಿ
ಅಖಿಲ ಕರ್ನಾಟಕ ವೀರಕನ್ನಡಿಗ ಮಾಜಿ ಸೈನಿಕರ ಸಂಘ ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿಯಲ್ಲಿ, 28 ಮದ್ರಾಸ್ ರೆಜ್ಮೆಂಟ್ 49 ನೇ ರೈಜಿಂಗ್ ಡೇ ಹಾಗೂ 3rd ಸ್ನೇಹಸಮ್ಮೆಳನ ಕಾರ್ಯಕ್ರಮ ನಡೆಯಿತು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸೇನೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಮಕ್ಕಳು ದೇಶಭಕ್ತಿಗೀತೆಗಳಿಗೆ ನೃತ್ಯ ಮಾಡಿದರು. ಸಂಪೂರ್ಣ ಕಾರ್ಯಕ್ರಮವನ್ನು ಡಾ! ಬಸವ್ವ ಹಮ್ಮಿಣಿ ಅವರು ನಿರೂಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷರುಗಳಾದ ಕ್ಯಾಪ್ಟನ್ ಅರ್ಜುನ್ ಕೋರಿ,,
ಬಸಪ್ಪ ಕೊಪ್ಪಡ,, ಹಾಗೂ ಉಪಾಧ್ಯಕ್ಷರಾದ ಶಂಕ್ರಪ್ಪ ತೇಲಿ,,ಮುಖ್ಯ ಅತಿಥಿ ಪಿ.ಎಸ್.ಐ ನಬಿಸಾಬ್ ವಾಲೀಕಾರ,ಫಕೀರಪ್ಪ ಪಾಟೀಲ ಮುಖ್ಯ ಅತಿಥಿಗಳು ಶಿವಕುಮಾರ ಐ ಅಂಗಡಿ ಪ್ರೊಫೆಸರ್,, ಹಾಗೂ ಎಲ್ಲಾ ಡಾರಿಂಗ್ ಬಟಾಲಿಯನ್ ನ ಮಾಜಿ ಸೈನಿಕರು ಹಾಗೂ ಹಾಲಿ ಸೈನಿಕರು ಹಾಗೂ ಚೊಳಚಗುಡ್ಡ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ವೀರನಗೌಡ ಪಾಟೀಲ, ಸೈನಿಕರಾದ ಮಲ್ಲಿಕಾರ್ಜುನ ಗಾಣಿಗೇರ, ಆನಂದ್ ಜವಳಗದ್ದಿ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ