ಬಾಗಲಕೋಟೆ : ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಜಿ ಅವರಿಂದ ಬಾಗಲಕೋಟೆ ಜಿಲ್ಲೆಯ ಅಲೆಮಾರಿ ಸಮುದಾಯದವರ ಕುಂದುಕೊರತೆ ಸಭೆ ನಡೆಸಿದರು.
ಕೋಟೆ ನಗರಿ ಬಾಗಲಕೋಟೆಯ ಪ್ರವಾಸಿಮಂದಿರದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಜಿ ಅವರು ಬಾಗಲಕೋಟೆ ಜಿಲ್ಲೆಯ ಅಲೆಮಾರಿ ಅಲೆ ಅಲೆಮಾರಿ ಸಮುದಾಯದವರ ಕುಂದುಕೊರತೆ ಸಭೆ ನಡೆಸಿ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದರು. ಅಲೆಮಾರಿ ಸಮುದಾಯದವರ ಸರಕಾರಿ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಮಾಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ತರಾಟೆಗೆ ತೆಗದುಕೊಂಡರು.
ಸಭೆಯಲ್ಲಿ ಜಿಲ್ಲೆಯಲ್ಲಿನ ಅಲೆಮಾರಿ ಸಮುದಾಯದವರು ಎದುರಿಯತ್ತಿರುವ ಸಮಸ್ಯೆಗಳ ಬಗ್ಗೆ ಮುಖಂಡರಿಂದ ಸಮಸ್ಯೆಗಳನ್ನು ಆಲಿಸಿದರು.
ಕುಂದುಕೊರತೆ ಆಲಿಸಿ ಮಾತನಾಡಿದ ಅಲೆಮಾರಿ ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ. ಜಿ. ಮಾತನಾಡಿ:–ರಾಜ್ಯದಲ್ಲಿ 51 ಪರಿಶಿಷ್ಟ ಜಾತಿಗಳು,, 23 ಪರಿಶಿಷ್ಟ ಪಂಗಡಗಳು,, 25 ಆದಿವಾಸಿಗಳು 100ಕ್ಕಿಂತ ಹೆಚ್ಚು ಅಲೆಮಾರಿ ಅಲೆ ಅಲೆಮಾರಿ ಸಮುದಾಯದವರು ಇದ್ದು ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಬಂದಮೇಲೇಯೂ ತುಳಿತಕ್ಕೆ ಒಳಗಾದ ಸಮುದಾಯದ ಎಂದರೆ ಅವರು ಅಲೆಮಾರಿ ಸಮುದಾಯವರು ಎಂದು ಹೇಳಲಾಗ್ತಾ ಇದೆ.
ಶಿಕ್ಷಣ ಹಾಗೂ ಆರ್ಥಿಕವಾಗಿ ಬಹಳಷ್ಟು ಹಿಂದೆ ಉಳಿದು ಸರಕಾರದ ಮೂಲಭೂತ ಸಾಲಭ್ಯಗಳನ್ನು ಪಡೆಯಲು ಅಲೆಮಾರಿಗಳು ಅಲೆದು ಅಲೆದು ಜರ್ಜರಿತಗೊಂಡು ಅಲೆಮಾರಿಗಳ ಬದುಕು ವೀವ್ರ ಸಂಕಷ್ಟದಲ್ಲಿದೆ.. ಇದೇ ಸಮುದಾಯದಲ್ಲಿ ಹುಟ್ಟಿದ ನನಗೆ ಅಲೆಮಾರಿ ನಿಗಮದ ಅಧ್ಯಕ್ಷೆಯಾಗಿ ಸರಕಾರ ಪ್ರತಿನಿಧಿಯಾಗಿ ನೇಮಿಸಿದೆ. ನನ್ನ ಸಮುದಾಯದವರು ಸರಕಾರದ ಯೋಜನೆಗಳನ್ನು ತಲುಪಿಸಿ ಅವರನ್ನು ಆರ್ಥಿಕವಾಗಿ ಶೈಕ್ಷಣಿಕವಾಗಿ ಮೇಲಕ್ಕೆ ಎತ್ತಲು ನಾನು ಕಂಕಣಬದ್ದಳಾಗಿ ಸಣ್ಣದ್ದವಾಗಿ ನಿಮ್ಮ ಜೊತೆಗೆ ನಿಮ್ಮ ಮನೆಮಗಳಾಗಿ ಬಂದಿದ್ದೇನೆ ಇಂದು ಎಲ್ಲರೂ ಒಗ್ಗಟ್ಟಾಗಿ ಜೊತೆಗೂಡಿ ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಿದರು.
ಸನಾದಿ ಅಪ್ಪಣ್ಣ ನವರ ಹೆಸರಿನಲ್ಲಿ ಸರಕಾರ ಪ್ರಶಸ್ತಿಯನ್ನು ಘೋಷಣೆ ಮಾಡಲು ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಪ್ರತಿ ಜಿಲ್ಲೆಲೆಯಲ್ಲಿಯೂ ಹೋಗಿ ನಾನು ಕುಂದುಕೊರತೆ ವಿಚಾರಿಸಿ ಅದಕ್ಕೆ ಸರಕಾರ ಮತ್ತು ನಿಮ್ಮ ಸೇತುವೆಯಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ. ಜಿ. ಅವರಿಗೆ ಸಭೆಯಲ್ಲಿ ಅಲೆಮಾರಿ ಅಲೆ ಅಲೆಮಾರಿ ಮುಖಂಡರು ಶಾಲು ಹೊದಿಸಿ ಸನ್ಮಾನ ಮಾಡಿ ಗೌರವಿಸಿದರು.. ಧ್ವನಿಯಿಲ್ಲದ ನಮ್ಮ ಸಮುದಾಯಕ್ಕೆ ನಮ್ಮ ಸಮುದಾಯದವರೇ ಆದ ನಿಮ್ಮನ್ನು ನಮ್ಮ ಧ್ವನಿಯಾಗಿ ನಿಲ್ಲಲು ಸಿಂಹಿಣಿಯಂತ ನಿಮ್ಮನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ನಮಗೆ ಸಂತಸ ತಂದಿದೆ ಎಂದು ಸಮುದಾಯದ ಮುಖಂಡರುಗಳು ಪಲ್ಲವಿ ಅವರ ಪಾದರಸದಂತ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ರಾಜ್ಯಧ್ಯಕ್ಷ ಬಸವರಾಜ್. ಚನ್ನಾದಾಸರ ಹೊಲೆಯದಾಸರ ಸೇವಾಸಮಿತಿ ಬೆಂಗಳೂರು ರಾಜ್ಯ ಕಾರ್ಯಧ್ಯಕ್ಷರಾದ ಪಿ. ಎಸ್. ಕವಡಿಮಟ್ಟಿ, ಸುಡುಗಾಡುಸಿದ್ದರ ಸಮಿದಾಯದ ಮುಖಂಡ ರುದ್ರಾಕ್ಷಿ, ರಂಗಭೂಮಿ ಕಲಾವಿದೆ ಹಾಗೂ ಚನ್ನದಾಸರ ಸಮುದಾಯದ ನಾಗರತ್ನ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಅಲೆಮಾರಿ ಅಲೆ ಅಲೆಮಾರಿ ಸಮುದಾಯಗಳ ಜಿಲ್ಲೆಯ ಮುಖಂಡರುಗಳು ಉಪಸ್ಥಿರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ