ಕಲಘಟಗಿ:– ಪಟ್ಟಣ ಸಮೀಪದ ಹಳಿಯಾಳ ರಸ್ತೆ ಹೊಂದಿಕೊಂಡಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸ್ಮಶಾನ ಭೂಮಿ ಖಾಸಗಿ ಲೇಔಟ ನಿಂದ ಧಕ್ಕೆ ಆಗುತ್ತಿದೆ ಎಂದು ಆರೋಪಿಸಿ ಕಲಘಟಗಿ ಕ್ರೈಸ್ತ ಸಮುದಾಯದ ಒಕ್ಕೂಟ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದೆ
ಸ್ಮಶಾನ ಭೂಮಿಗೆ ಹೊಂದಿಕೊಂಡು ಖಾಸಗಿಯವರು ಲೇಔಟ ಕಾಮಗಾರಿ ನಡೆಸಿದ್ದು, ಸ್ಮಶಾನಕ್ಕೆ ಹಾಕಿರುವ ತಂತಿ ಬೇಲಿ ನಾಶ ಹಾಗೂ ಜಾಗೆಗೆ ಧಕ್ಕೆ ಆಗುವಂತಹ ಕೆಲಸ ಮಾಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಸ್ಮಶಾನಕ್ಕೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಠಾಣೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ವೇಳೆ ಕಲಘಟಗಿ ಕೈಸ್ತ ಮೂದಾಯದ ಒಕ್ಕೂಟದ ಅಧ್ಯಕ್ಷ ಆರ್. ಪ್ರಸಾದರಾವ್, ಉಪಾಧ್ಯಕ್ಷ ಜೊನ ಖಾನಾಪುರ, ಕಾರ್ಯದರ್ಶಿ ಪ್ರಕಾಶ ಧೂಪದ, ಖಜಾಂಚಿ ಪಾಸ್ಟರ ಸತಂ,
ಸದಸ್ಯರಾದ ಪಾಸ್ಟರ ಸುನಿಲ್, ಪಾಸ್ಟರ ವೆಂಕಪ್ಪ, ಪಾಸ್ಟರ ಗೊಪಾಲ, ಕೈಸ್ತ ಸಮಾಜದ ಹಿರಿಯರಾದ ಯೊಹಾನ ಭಂಡಾರಿ ಉಪಸ್ಥಿತರಿದ್ದರು
ವರದಿ:- ಶಶಿಕುಮಾರ ಕಟ್ಟಿಮನಿ