Ad imageAd image

ಅವಳಿನಗರ ಅಭಿವೃದ್ಧಿಯೊಂದೆ ಗುರಿ : ಮೇಯರ್ 3 ತಿಂಗಳಿಗೊಮ್ಮೆ ಪರಿಶೀಲನೆ – ಶೀಘ್ರ ವಾರ್ಡ ಸಮಿತಿ

Bharath Vaibhav
ಅವಳಿನಗರ ಅಭಿವೃದ್ಧಿಯೊಂದೆ ಗುರಿ : ಮೇಯರ್ 3 ತಿಂಗಳಿಗೊಮ್ಮೆ ಪರಿಶೀಲನೆ – ಶೀಘ್ರ ವಾರ್ಡ ಸಮಿತಿ
WhatsApp Group Join Now
Telegram Group Join Now

ಹುಬ್ಬಳ್ಳಿ :- ಹುಬ್ಬಳ್ಳಿ ಧಾರವಾಡ ಅವಳಿ ನಗರ ಅಭಿವೃದ್ಧಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಮಹಾಪೌರರಾದ ರಾಮಣ್ಣ ಬಡಿಗೇರ ಹೇಳಿದರು.

ಪ್ರಥಮ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂದು ನಡೆದ ಚೊಚ್ಚಲ ಸಾಮಾನ್ಯ ಸಭೆಯಲ್ಲಿ ತಮ್ಮ ಯೋಜನೆ, ಗುರಿ ಕುರಿತು ಮನದಾಳ ಬಿಚ್ಚಿಟ್ಟ ಅವರು ಮಹಾನಗರದ ಅಭಿವೃದ್ಧಿಗೆ ತಾವು ಪಣ ತೊಟ್ಟಿರುವುದಾಗಿ ಹೇಳಿದರು.

ಕುಡಿಯುವ ನೀರಿನ ಕರದ ಮೇಲಿನ ದಂಡದ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲ ಸದಸ್ಯರ ಸಹಕಾರ ಬಯಸಿದ ಅವರು, ಪ್ರತಿ ವಾರ್ಡ್ ಗಳಲ್ಲಿ ನಾಗರಿಕರನ್ನೊಳಗೊಂಡ ವಾರ್ಡ್ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಹೇಳಿದರು.

ಉಪಮೇಯರ್ ಲಕ್ಷ್ಮೀಬಾಯಿ ಬಿಜವಾಡ, ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಸಭಾ ನಾಯಕ ವೀರಣ್ಣ ಸವಡಿ ತಿಪ್ಪಣ್ಣಾ ಮಜ್ಜಗಿ ಸೇರಿದಂತೆ ಎಲ್ಲ ಸದಸ್ಯರು ಭಾಗವಹಿಸಿದ್ದರು.

ಗೌನ್ ಸಂಪ್ರದಾಯ ಮುಂದುವರಿಸಿದ, ರಾಮಣ್ಣ ಪ್ರಸಕ್ತ ಮಹಾನಗರಪಾಲಿಕೆಯ ನೂತನ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಅಧಿಕಾರ ಸ್ವೀಕರಿಸಿದ ಮೊದಲ ಎರಡು ಮೇಯರ್‌ಗಳಾದ ಈರೇಶ ಅಂಚಟಗೇರಿ ಮತ್ತು ವೀಣಾ ಬರದ್ವಾಡ ಇಬ್ಬರೂ ಗೌನ್ ಧರಿಸದೆ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ರಾಮಣ್ಣ ಮತ್ತೆ ಗೌನ್ ಧರಿಸಿ ಅದಕ್ಕೆ ಮತ್ತೆ ಘನತೆ ತಂದಿದ್ದಾರೆ.

ವರದಿ:-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!