ಕೇರಳ : ಪ್ರಕೃತಿ ಮುನಿಸಿಕೊಂಡಾಗ ಸಾಮಾನ್ಯ ಮನುಷ್ಯ ಏನು ತಾನೆ ಮಾಡಲು ಸಾಧ್ಯ..? ಏನೂ ಇಲ್ಲದ ನಶ್ವರನಾಗಿ ನಿಂತು ಬಿಡುತ್ತಾನೆ. ಇದಕ್ಕೆ ಜ್ವಲಂತ ಉದಾಹರಣೆ ಕೇರಳ.ಕೇರಳದ ವಯನಾಡಿನಲ್ಲಿ ಪರಿಸ್ಥಿತಿ ಅಯೋಮಯವಾಗಿದ್ದು, ಎಲ್ಲಾ ಕಡೆ ಸಾವು ನೋವುಗಳ ಆರ್ತನಾದ ಕೇಳಿಬರುತ್ತಿದೆ.
ಎಲ್ಲಿ ನೋಡಿದರೂ ಹೆಣದ ರಾಶಿ, ಸಾವು ನೋವು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭೀಕರ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 200 ರ ಗಡಿ ದಾಟಿದೆ. ಸೇನಾ ಪಡೆಗಳು ಹಗಲು ರಾತ್ರಿ ಎನ್ನದೇ ಬದುಕುಳಿದವರ ರಕ್ಷಣಾ ಕಾರ್ಯ ಮಾಡುತ್ತಿದೆ.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ ನೀಡಿದ್ದಾರೆ. “ಈ ಕಷ್ಟದ ಸಮಯದಲ್ಲಿ ಅದಾನಿ ಗ್ರೂಪ್ ಕೇರಳದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ” ಎಂದು ಅದಾನಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈವರೆಗೆ 144 ಶವಗಳನ್ನು ಹೊರತೆಗೆಯಲಾಗಿದ್ದು, 191 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ರಕ್ಷಿಸಲ್ಪಟ್ಟವರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.