ಕಲಘಟಗಿ: –ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ವರ್ಗೀಕರಣಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಬಹುಮತದೊಂದಿಗೆ ಅನುಮತಿ ನೀಡಿರುವ ಹಿನ್ನೆಲೆ ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.
ಪಪಂ ಮಾಜಿ ಸದಸ್ಯ ಬಸವರಾಜ ಮಾದರ ಮಾತನಾಡಿ, ಒಳ ಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಸೌಲಭ್ಯದಿಂದ ವಂಚಿತವಾಗುತ್ತಿದ್ದ ಸಮಾಜಕ್ಕೆ ನ್ಯಾಯ ದೊರೆತಂತಾಗಿದೆ ಎಂದು ಹೇಳಿದರು.
ಈ ವೇಳೆ ಪಪಂ ಮುಖಂಡರಾದ ಯಲ್ಲಪ್ಪ ಯಲ್ಲಪ್ಪ ಮೇಲಿನಮನಿ, ಅನಿಲಪಮ್ಮಾರ, ಫಕ್ಕೀರಗೌಡ ದೊಡ್ಡಮನಿ, ಶಶಿಧರ ಹುಲಿಕಟ್ಟಿ, ಪರಶುರಾಮ ಹುಲಿಹೊಂಡ, ಪರಶುರಾಮ ಕುರುಬರ, ಸತೀಶ ಹರಿಜನ, ಬಸವರಾಜ ಹುಲಮನಿ, ರವಿ ಬಡಿಗೇರ, ಶಶಿಕುಮಾರ ಕಟ್ಟಿಮನಿ ಇತರರಿದ್ದರು.
ವರದಿ :-ನಿತೀಶಗೌಡ ತಡಸ ಪಾಟೀಲ್