Ad imageAd image

ಮುಕುಂದ ನಾರಾಯಣ ಕುಲಕರ್ಣಿ ಇವರ 29 ಗುಂಟಾ ಜಮೀನು ಬೇರೆಯವರ ಹೆಸರರಿಗೆ ವರ್ಗಾವಣೆ

Bharath Vaibhav
ಮುಕುಂದ ನಾರಾಯಣ ಕುಲಕರ್ಣಿ ಇವರ 29 ಗುಂಟಾ ಜಮೀನು ಬೇರೆಯವರ ಹೆಸರರಿಗೆ ವರ್ಗಾವಣೆ
WhatsApp Group Join Now
Telegram Group Join Now

ನಿಪ್ಪಾಣಿ :-ತಾಲೂಕಿನ ಸಂಡೂರ ಗ್ರಾಮದ ಮುಕುಂದ ಕುಲಕರ್ಣಿ ಇವರ ಸರ್ವೆ ನಂ.110 -1 (ಬಿ) ಪ್ರಕಾರ ಹಕತ್ವದಲ್ಲಿದ್ದಾಗ ಗ್ರಾಮದ 29 ಜನರಿಗೆ ಮಾರಾಟ ಮಾಡಲಾಗಿತ್ತು.

ಆದರೆ ಈಗ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಡೈರಿ ಸಂಖ್ಯೆ ಎರಡು ಸೇರಿಸಿ ಆನಂದ ಜಾನು ದಾಮೋದೆ ಎಂಬುವವರ ಹೆಸರಿಗೆ 29 ಗುಂಟಾ ಜಮೀನು ವರ್ಗಾವಣೆ ಆಗಿರುವುದು ತೋರಿಸುತ್ತಿದೆ.

ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ 29 ಹಕ್ಕುದಾರರು ಗ್ರಾಮ ಪಂಚಾಯಿತಿಯಲ್ಲಿ (ಪಿ ಡಿ ಓ) ನಾ, ಇ-ಪ್ರತಿ, ಡೈರಿ ಪ್ರತಿ ಮತ್ತು ಸಹಿ ಪ್ರತಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ.ಆದರೆ ಗ್ರಾಮ ಪಂಚಾಯಿತಿ ಗಮನಕ್ಕೆ ಬಂದಿಲ್ಲ ಎಂಬಂತೆ ನಡೆಯುತ್ತಿದೆ ಒಂಬತ್ತು ತಿಂಗಳಿಂದ ಮಾಹಿತಿ ಕಾಗದಪತ್ರ ನೀಡಲು ಪಿ ಡಿ ಓ ಕೂಡ ನಿರಾಕರಿಸಿದ್ದಾರೆ.

ನ್ಯಾಯಾಲಯದಿಂದ ಈ ಜಮೀನು 29 ಹಕ್ಕುದಾರರಿಗೆ ಸೇರಿದ್ದು, ಎಂದು ತೀರ್ಪು ನೀಡಿದರೂ ಗ್ರಾಮ ಪಂಚಾಯಿತಿಯಿಂದ ಎರಡನೇ ಹಕ್ದಾರರನ್ನು ರದ್ದುಪಡಿಸಿಲ್ಲ.ಈ ಯಾವ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳದೆ ಮುಖ್ಯ ಹಕ್ಕುದಾರನಿಗೆ ಅಸಭ್ಯ ವರ್ತನೆ ಹಾಗೂ ಸುಳ್ಳು ಹೇಳಿಕೆಯನ್ನು ಕೊಡಲಾಗುತ್ತಿದೆ ಎಂದು ಮೂಳೆ ಹಕ್ಕದಾರರು ಅರೂಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಜನರು ಸಿಟ್ಟಿಗೆದ್ದ ಇನ್ನು ಏಳು ದಿನದೊಳಗೆ ಗ್ರಾಮ ಪಂಚಾಯಿತಿಗೆ ಸರಿಯಾದ ದಾಖಲೆಗಳನ್ನು ನೀಡದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕುವದಾಗಿ ಎಲ್ಲ 29 ಹಕ್ಕುದಾರರ ಪರವಾಗಿ ಪಾಂಡುರಂಗ ತೋಡ್ಕರ ಇವರು ಎಚ್ಚರಿಸಿದ್ದಾರೆ.

ಆ ವೇಳೆ ಅಧಿಕಾರದಲ್ಲಿದ್ದಾಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಜಿರಾವ್ ಭೋಸಲೆ, (ಪಿ ಡಿ ಓ) ವಾಳಕೆ ಶಿವರಾಜ್ ಧಾಮಣೆ ಕಂಪ್ಯೂಟರ್ ಆಪರೇಟರ್ ಭ್ರಷ್ಟಾಚಾರ ನಡೆಸಿ ದಾಮೋದೆ ಅವರ ಹೆಸರಿಗೆ ಜಮೀನು ವರ್ಗಾಯಿಸಿ ದಾಮೋದೆ ಅವರಿಂದ ಹಣ ಪಡೆದಿದ್ದಾರೆ ಎಂದು ಅರ್ಪಿಸಿದ್ದಾರೆ.

ಈ ಎಲ್ಲ ಪ್ರಕರಣಗಳ ತನಿಖೆ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಮೂಲ ಜಮೀನು ಮಾಲೀಕರಾದ ಮುಕುಂದ ಕುಲಕರ್ಣಿ ಇವರು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮಹಾದೇವ ತೋಡಕರ, ಸಂಜಯ ಅಂಬೋಳೆ, ಸೂರ್ಯಕಾಂತ ತೋಡಕರ, ಶಂಕರ ತೊಂಡಲೆ, ಶಿವಾಜಿ ಪವಾರ, ಚಂದ್ರಕಾಂತ ತೋಡಕರ, ಸುನೀಲ ಹೊರ್ಮಲೆ, ಗೋಪಾಲ ಸೂರ್ಯವಂಶಿ, ಎಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!