ನಿಪ್ಪಾಣಿ :- ಶಿರದವಾಡ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಬಿಜೆಪಿಯ ದೀಕ್ಷಿತಾ ಕಾಂಬಳೆ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ರಾಷ್ಟ್ರವಾದಿ ಕಾಂಗ್ರೆಸ ಪಕ್ಷದ ಶರದ ಪವಾರ ಬಣದ ವಿಜಯ ರೋಹಿದಾಸ್ ಆಯ್ಕೆಯಾದರು.
ಇದೆ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನಿಪ್ಪಾಣಿ ಕ್ಷೇತ್ರದ ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆ ಇವರಿಂದ ಶುಭ ಹಾರೈಸಿ ಗೌರವಿಸಿ ಸನ್ಮಾನಿಸಲಾಯಿತು.ದೀಕ್ಷಿತಾ ಕಾಂಬಳೆ ಹಾಗೂ ರೋಹಿದಾಸ್ ಆಯ್ಕೆಗೆ ಕೃತಜ್ಞತೆ ಸಲ್ಲಿಸಿ ಮುಂದೆಯೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಶ್ರೀ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯೆ ಯಾಸ್ಮಿನ್ ಚೌಸ್, ಮಾಜಿ ಗ್ರಾ.ಪಂ ಸದಸ್ಯರಾದ ಕುಮಾರ ಪಾಟೀಲ, ಸುರೇಶ ಖೋತ್, ಅಣ್ಣಾ ಪಾಟೀಲ, ಸಂಜಯ ಪಾಟೀಲ, ಸಿದ್ದು ಲಾಡ್ಗೆ, ನಜೀರ ಚಾಸ್, ರಾಮಗೌಡ ಪಾಟೀಲ, ಚಿಂತಾಮಣಿ ಪಾಟೀಲ, ಎಸ್. ಪ. ಪಾಟೀಲ್, ಗೋಟು ಪಾಟೀಲ್, ಗಜು ಮಗ್ದೂಮ್, ಅಪ್ಪಾಸಾಹೇಬ ಪಾಟೀಲ್, ಗುಂಡೂರಾವ್ ಪಾಟೀಲ್, ಪದ್ಮರಾಜ್ ಪಾಟೀಲ್ ಸೇರಿದಂತೆ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :-ರಾಜು ಮುಂಡೆ