Ad imageAd image

ಶರಣ ಶಂಕರ ದಾಸಿಮಯ್ಯನವರ ಜಯಂತಿ

Bharath Vaibhav
ಶರಣ ಶಂಕರ ದಾಸಿಮಯ್ಯನವರ ಜಯಂತಿ
WhatsApp Group Join Now
Telegram Group Join Now

ಇಳಕಲ್ :- ಕ್oದಗಲ್ಲ  ನವಲೆ ಗ್ರಾಮದಲ್ಲಿ ಶರಣ ಶಂಕರ ದಾಸಿಮಯ್ಯನವರ ಜಯಂತಿಯನ್ನು ಬಣಗಾರ ನಾಗಲಿಕ ಸಮಾಜ ಬಾಂಧವರು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.

ಬಸವಾದಿ ಶರಣರ ಸಮಕಾಲಿನವರಾಗಿದ್ದರು ವಚನಗಳಿಂದ, ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಉತ್ತಮವಾದ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು ಶರಣ ಶಂಕರದಾಶಿಮಯ್ಯನವರು ಎಂದು ಸಮಾಜದ ಮುಖಂಡ ಸುರುಪುರದ ವಸಂತ್ ಕುಮಾರ್ ಬಣಗಾರ ಹೇಳಿದರು. ಸುಕ್ಷೇತ್ರ ಶ್ರೀ ನವಲೆ ಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯು ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ರೀತಿಯಲ್ಲಿ ಸೇರಿ ಸಾಂಸ್ಕೃತಿಕ ಸಾಹಿತ್ಯಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಂಕರ್ ಲಿಂಗ ದೇವರ ಕೃಪಗೆ ಪಾತ್ರರಾಗಬೇಕು, ಎಂದರು.

ನೂಲಿಗೆ ಬಣ್ಣ ಹಾಕುವವರು, ಬಣಗಾರರು ಸೂಜಿ ಕಾಯಕದಿಂದ ಪ್ರಸಿದ್ಧಿಯಾದವರು ಸಿಂಪಿಗರು ಎಂದು ಆನಂದ್ ಬಾರಿಗಿಡ ಹೇಳಿದರು.
ಶ್ರಾವಣ ಮಾಸದ ಪ್ರಯುಕ್ತ ಪ್ರತಿದಿನ ಬೆಳಗ್ಗೆ 8:00ಗೆ ಅಭಿಷೇಕ, ಅನ್ನದಾಸೋಹ ನೆಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ,ಶೇಖರ ನಾಗಲಿಕರ. ಕಿರಣ ಕಂದಗಲ್ಲ . ಮಲ್ಲಿಕಾರ್ಜುನ ಮಜ್ಜಿಗೆ, ಸಂತೋಷ್ ಸರಾಫ, ಅಕ್ಕ ಮಹಾದೇವಿ ಗಣಮುಖಿ, ಸೂಗಪ್ಪ ಕಲಿಕೇರಿ,ಶ್ರೀಧರ್ ಮಸ್ಕಿ ,ರವಿಶಂಕರ್ ಕಂದಗಲ್, ಶಶಿರೇಖಾ,ಶಕುಂತಲಾ ಸರಾಫ್, ರಮೇಶ್ ಮೇಣಜಿಗಿ, ಸಾಗರ್, ಬಸವ ಸೃಷ್ಟಿ ಭಾಗಿಯಾಗಿದ್ದರು.
ಇಲಕಲ್ಲನ ಜಗದೀಶ್ ಸರಾಫ, ಹಾಗೂ ಕಂದಗಲ್ಲದ ಪತ್ರಕರ್ತ ವೀರೇಶ ಶಿಂಪಿ ಸಂಪೂರ್ಣ ಕಾರ್ಯಕ್ರಮ ನೆಡೆಸಿಕೊಟ್ಟರು.

ವರದಿ ದಾವಲ್ ಸೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!