ಐಗಳಿ: -ಆದರ್ಶ ಶಿಕ್ಷಣ ಸಂಸ್ಥೆ ವತಿಯಿಂದ ನೂತನ ವಾಗಿ ಪ್ರಾರಂಭವಾದ ಸಿದ್ರಾಮಪ್ಪಾ ತೆಲಸಂಗ ಸ್ವತಂತ್ರ ಪದವಿ ಪೂರ್ವ ಕಾಲೇಜು ( ಕಾಲಾ ಮತ್ತು ವಾಣಿಜ್ಯ ಪಿಯುಸಿ ಪ್ರಥಮ ವರ್ಗದ ವಿಧ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮಂಗಳವಾರ ರಂದು ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಶಾಲೆ ಮುಖ್ಯಸ್ಥ ಎ ಎಸ್ ತೆಲಸಂಗ ಮಾತನಾಡಿ ಆದರ್ಶ ಶಿಕ್ಷಣ ಸ್ಥಾಪನೆಯಾಗಿ ೨೫ ವರ್ಷಗಳು ಕಳದಿದೆ ಶಿಕ್ಷಣ ದಲ್ಲಿ ಮಕ್ಕಳಿಗೆ ಅಪಾರವಾದ ಪ್ರೀತಿಯನ್ನು ಗಳಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಈ ವರ್ಷ ನನ್ನ ತಂದೆ ಯವರ ಹೆಸರಿನಿಂದ ಸಿದ್ರಾಮಪ್ಪ ತೆಲಸಂಗ ಪದವಿ ಪೂರ್ವ ಕಾಲೇಜು ಪ್ರಾರಂಬಿಸಿದ್ದು ಈಗಾಗಲೇ ಇದೆ ವರ್ಷ 30 ವಿಧ್ಯಾರ್ಥಿಗಳು ಪ್ರವೇಶ ಪಡದ್ದಿದ್ದಾರೆ.
ಗ್ರಾಮೀಣ ಭಾಗದ ಎಲ್ಲ ವಿಧ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆದು ಸಂಸ್ಥೆಯ ಕೀರ್ತಿ ಹಾಗೂ ತಂದೆ ತಾಯಿಗಳ ಆಸೆಗಳನ್ನು ಆಕಾಶದತ್ತರಕ್ಕೆ ಒಯ್ಯಲು ತಿಳಿಸಿದರು ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ವೃತ್ತಿ ಪರ ಕೋರ್ಸ್ ಗಳನ್ನು ತಂದು ಗ್ರಾಮೀಣ ವಿಧ್ಯಾರ್ಥಿಗಳಿಗೆ ಕಲ್ಪವೃಕ್ಷವಾಗಿ ನಿಲ್ಲುತ್ತದೆ. ಸಂಸ್ಥೆ ಬೆಳವಣಿಗೆಗೆ ಸಂಸ್ಥಾಪಕ ರಾದ ಸಿ ಎಸ್ ನೇಮಗೌಡ ಅವರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.’
ನಂತರ ಎಮ್ ಎಮ್ ಸಿಂಧೂರ ನಿವೃತ್ತಿ ಜಂಟಿ ನಿರ್ದೇಶಕರು ಶಿಕ್ಷಣ ಇಲಾಖೆ ಇವರು ಮಾತನಾಡಿ ಕಳೆದ 30 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಸಿದ್ದೇನೆ. ಶಿಕ್ಷಣ ಇಲಾಖೆಕೆಯ ಬಗ್ಗೆ ಹೆಮ್ಮ ಇದೆ ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ನನಗೆ ಏನೂ ಸಿಕ್ಕಿದೆ ಅನ್ನೂವುದಕ್ಕಿಂತ ನಾನು ದೇಶಕ್ಕೆ ಏನೂ ಕೊಡುಗೆ ನೀಡದ್ದೇನೆ ಏನೂ ನೀಡಬಹುದು ಎಂಬುದುದರ ಬಗ್ಗೆ ವಿಚಾರ ಮಾಡಬೇಕು ಚಿತ್ರ ನಟರು ಕ್ರಿಕೆಟ್ ಆಟಗಾರರಿಗೆ ಆದ್ಯತೆ ನೀಡದೆ ಶಿಕ್ಷಣ ಸೈನಿಕ ರೈತರಿಗೆ ಆದ್ಯತೆ ನೀಡಬೇಕು ಪ್ರತಿಯೊಂದ ಮನುಷ್ಯನ ಆದ್ಯತೆ ಬದಲಾಗಬೇಕು ಈ ಸಂಸ್ಥೆಯು ಪದವಿ ಯಿಂದ ವಿಶ್ವ ವಿದ್ಯಾಲಯವರಿಗೆ ಬೆಳೆಯಲಿ ಎಂದು ಹಾರೈಸಿದರು.
ಶ್ರೀ ವಿರೇಶ್ವರ ದೇವರು ಹಿರೇಮಠ ತೆಲಸಂಗ ಅವರು ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ನಮ್ಮ ದೇಶದ ಜನಸಂಖ್ಯೆಯಲ್ಲಿ ನಾವು ನಂ ೧ ಇದ್ದೇವೆ ಆದರೆ ಸಾಧನೆಯಲ್ಲಿ ಹಿಂದೆ ಇದ್ದೇವೆ ಒಲಿಂಪಿಕ್ ನಲ್ಲಿ ನಮ್ಮ ದೇಶ 58ನೇಯ ಸ್ಥಾನದಲ್ಲಿ ಇದೆ. ಆದರಿಂದ ನಮ್ಮ ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಅದು ದೇಶಕ್ಕೆ ನೀವು ನೀಡುವ ಕೊಡುಗೆಯಾಗುತ್ತದೆ. ವಿಧ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಶಿಸ್ತು ಬಹು ಮುಖ್ಯ ಅದು ಆದರ್ಶ ಶಾಲೆಯಲ್ಲಿ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿ ಎಸ್ ನೇಮಗೌಡ ಪ್ರಲ್ಹಾದ ಪಾಟೀಲ ಬಿ ಎಸ್ ಬಿರಾದಾರ ಅಪ್ಪಸಾಬ ಪಾಟೀಲ ಬಸವರಾಜ ಬಿರಾದಾರ ಶಿವಾನಂದ ಸಿಂಧೂರ ಅಪ್ಪಸಾಬ ತೆಲಸಂಗ ಯಲ್ಲಪ್ಪ ಮಿರ್ಜಿ ಮತ್ತು ಸಂಸ್ಥೆ ಅಧ್ಯಕ್ಷರು ಸದಸ್ಯರು ಶಾಲೆ ಮುಖ್ಯೋಪಾಧ್ಯಾಯ ಡಿ ಎಲ್ ಕದಂ ಸೇರಿದಂತೆ ಶಿಕ್ಷಕರು ಶಿಕ್ಷಕಿಯರು ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಮುಂತಾದವರು ಉಪಸ್ಥಿತಿ ಇದ್ದರು.
ವರದಿ:- ಆಕಾಶ ಎಮ್