ಹುಬ್ಬಳ್ಳಿ: –ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಮೌನ ಮುರಿದು ಬಾಂಗ್ಲಾದೇಶಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿ, ಹಿಂದೂಗಳ ರಕ್ಷಣೆ ನೀಡಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶ ಸರ್ಕಾರ ಹಾಗೂ ಅಲ್ಲಿಯ ವಿದ್ಯಾರ್ಥಿಗಳ ಆಂತರಿಕ ತಿಕ್ಕಾಟ ನಡೆದಿದ್ದು, ಅಲ್ಲಿರುವ ಹಿಂದೂಗಳ ದೇವಸ್ಥಾನ, ಹಿಂದೂ ಮಹಿಳೆಯರು ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.
ನಮ್ಮಿಂದಲೇ ಬಾಂಗ್ಲಾದೇಶ ಹುಟ್ಟಿದೆ. ಮೊದಲು ಶೇ. ೧೨ ರಷ್ಟು ಹಿಂದೂಗಳ ಜನಸಂಖ್ಯೆ ಇತ್ತು. ಈಗ ಶೇ. ೫ ಕ್ಕೆ ಇಳಿದಿದೆ. ಭಾರತ ಬಾಂಗ್ಲಾದೇಶಕ್ಕೆ ಸಂಪೂರ್ಣ ಸಹಕಾರ ನೀಡಲಾಗಿದೆ. ಯಾವುದೇ ಉಪಕಾರ ಸ್ಮರಿಸದ ಇಸ್ಲಾಮಿಕ್ ಗಳು ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.ಈಗಲಾದರೂ ಪ್ರಧಾನಿ ಮೋದಿ ಮೌನ ಮುರಿಯಬೇಕು. ನಿಮಗೆ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ ಕಣ್ಣಿಗೆ ಕಾಣುತ್ತಿಲ್ಲ ಯಾಕೆ?. ತಕ್ಷಣ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬೇಕು. ಇಸ್ರೇಲ್ ನಂತೆ ಬಾಂಗ್ಲಾದೇಶಕ್ಕೆ ಹೊಕ್ಕು ಹೊಡೆಯಬೇಕು. ಅಲ್ಲಿ ಹಿಂದೂಗಳಿಗೆ ರಕ್ಷಣೆ ಇಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ೧೦ ಲಕ್ಷಕ್ಕೂ ಹೆಚ್ಚು ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ಆಶ್ರಯ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದ್ದು, ಇವರ ವಿರುದ್ಧ ಕ್ರಮವನ್ನು ರಾಜ್ಯದ ಗೃಹ ಸಚಿವರು ಸುಮ್ಮನೇ ಕುಳಿತಿರುವುದು ಸರಿಯಲ್ಲ. ಉಭಯ ರಾಷ್ಟ್ರೀಯ ಪಕ್ಷಗಳು ಇಂತಹ ಅಕ್ರಮ ನುಸುಳುಕೋರರನ್ನು ಓಟ್ ಬ್ಯಾಂಕ್ ಗಾಗಿ ಆಶ್ರಯ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಇಂತವರ ವಿರುದ್ಧ ಶ್ರೀರಾಮಸೇನೆ ವತಿಯಿಂದ ರಾಜ್ಯದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರ ನೇತೃತ್ವದಲ್ಲಿ ೫ ಜನರು ಸಮಿತಿಯೊಂದನ್ನು ರಚೆನೆ ಮಾಡಿ, ರಾಜ್ಯದಲ್ಲಿ ಅಕ್ರಮವಾಗಿ ಎಲ್ಲಲ್ಲಿ ನುಸುಳುಕೋರರು ನೆಲೆಸಿದ್ದಾರೆ ಎಂಬ ವರದಿಯನ್ನು ಸಿದ್ದಪಡಿಸಿ, ಶೀಘ್ರದಲ್ಲೇ ಸರ್ಕಾರಕ್ಕೆ ಸಂಬಂಧಿಸಿದ ಸಚಿವರಿಗೆ ವರದಿ ನೀಡಲಾಗುವುದು ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಆಗಷ್ಟ್ ೧೨ ರಂದು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಕೂಡಾ ದೇಶದ ಗಡಿಯಲ್ಲಿ ಸೂಕ್ತ ಭದ್ರತೆಯಿಲ್ಲ ಎಂದರು.
ವರದಿ:-ಸುಧೀರ್ ಕುಲಕರ್ಣಿ