ಮುದಗಲ್ :-ಪಟ್ಟಣದ ವಾರ್ಡ ನಂಬರ್ :- 3 ವಿದ್ಯುತ್ ಕಂಬಗಳು ಇದ್ದರು ಕರೆಂಟ್ ಸಂಪರ್ಕ ಇಲ್ಲ ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ನಿಯಮಿತ ಮುದಗಲ್ಲ .ಶಾಖಾಧಿಕಾರಿಯಾದ ಬನ್ನೆಪ್ಪ ಅವರಿಗೆ ವಾಡ೯ ನಂಬರ್ :- 03 ಸ್ಥಳೀಯ ನಿವಾಸಿಗಳು ಮನವಿ ಪತ್ರ ಸಲ್ಲಿಸಿದರು .
ಮುದಗಲ್ಲ ನ ವಾಡ೯ ನಂಬರ್ ಕಾಲೋನಿ (ಹಸನ್ಮಿಯಾ ಲೇಔಟ್) ಸುಮಾರು 12-13 ವರ್ಷಗಳ ಸರಿಯಾದ ವಿದ್ಯುತ್ ಕಂಬಗಳು ಇದ್ದು ಪರಿವರ್ತಕ ಇರುವುದಿಲ್ಲ.ಸ್ಥಳೀಯರು ಬೇರೆ ಓಣಿಯಿಂದ ಬಲ್ಲಿಸ್ ಳನ್ನು ಹಾಕಿಕೊಂಡು ವಿದ್ಯುತ್ ತೆಗೆದು ಕೊಂಡಿದ್ದಾರೆ.ಈ ಕಾಲೋನಿಯಲ್ಲಿ ಸರಿ ಸುಮಾರು 60 ರಿಂದ 70 ಮನೆಗಳು ಇದ್ದು ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟಿದ್ದಾರೆ.
ಕಂಬಗಳು ಇಲ್ಲದಿರುವುದ ರಿಂದ ಜೋರಾಗಿ ಗಾಳಿ ಬಂದು ಪದೇ ಪದೇ ಬಲಿಸ್ಗಳು ಬಿಳುತ್ತಿವೆ. ಇದರಿಂದ ಇಲ್ಲಿ ವಾಸವಾಗಿರುವ ಸಾರ್ವ ಜನಿಕರಿಗೆ ಸಾಕಷ್ಟು ಬಾರಿ ವಿದ್ಯುತ್ ಹೊಡೆದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇ ಹಿಂದೆ ಜಾನುವಾರುಗಳಿಗೂ ವಿದ್ಯುತ್ ತಗುಲಿ 2 ಆಕಳುಗಳು ಮೃತಪಟ್ಟಿವೆ ಇದರಿಂದ ನಾವುಗಳು ಭಯದ ವಾತವಾರಣ ದಲ್ಲಿ ಓಡಾಡುತ್ತಿದ್ದೇವೆ.
ಇದಕ್ಕೆ ಸಂಬಂಧಿಸಿದಂತೆ ,ಸಾಕಷ್ಟು ಬಾರಿ ಈ ಹಿಂದಿನ ಮುದಗಲ್ಲ ನ ಶಾಖಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ತೆಗೆದು ಕೊಂಡಿಲ್ಲ ಏನಾದರೂ ಆನಾಹೂತಗಳು ಸಂಭಾವಿಸದರೇ ಜೆಸ್ಕಾಂ ಅಧಿಕಾರಿಗಳೇ ನೇರವಾಗಿ ಹೋಣೆ ಗಾರರಾಗಿರುತ್ತಾರೆ
ಆದಷ್ಟು ಬೇಗನೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಸ್ಸಿಮೇಟ್ ಮಾಡಿಸಿ ನಮ್ಮ ವಾರ್ಡಗೆ ವಿದ್ಯುತ್ ಕಂಬ ಮತ್ತು ಪರಿವರ್ತಕ ಅಳವಡಿಸಿ ವಿದ್ಯುತ್ ದೊರಕಿಸಬೇಕೆಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ :- ವಾಡ೯ ನಂಬರ್ :-03 ರ ಸ್ಥಳೀಯ ನಿವಾಸಿಗಳಾದ ಸಂತೋಷ ಕುಮಾರ್,ಶ್ಯಾಮೀದ್ ಸಾಬ,ಖದೀರ್, ಹುಸೇನ್ ನಪ್ಪ ,ಖಾಸಿಂ ಸಾಬ ,ಅಜೀಜ್, ರಾಜಪ್ಪ, ವಾಜೀದ್, ರಾಜಪ್ಪ ಇತರರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ