ಸಿರುಗುಪ್ಪ :– ನಗರದ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಹತ್ತಿರದ ಹೂವು ಮತ್ತು ಹಣ್ಣು ಇನ್ನಿತರ ವ್ಯಾಪಾರದ ತಳ್ಳುಗಾಡಿಗಳನ್ನು ಹಿಂದಕ್ಕೆ ಸರಿಸಿದ ಪೋಲೀಸ್ ಇಲಾಖೆಯು ಇಟ್ಟಿಗೆಗಳಿಂದ ಗಡಿಯನ್ನು ನಿರ್ಮಿಸಿ ರಸ್ತೆಯ ಬಳಿ ಬಾರದಂತೆ ಸೂಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ನಮ್ಮ ತಳ್ಳುಗಾಡಿಗಳು ಇದ್ದಲ್ಲೇ ಇರುತ್ತವೆ ಸಾರ್ ಬೇರೆ ಕಡೆಯಿಂದ ವಾಹನಗಳಲ್ಲಿ ಬಂದು ತರಕಾರಿ ಮತ್ತು ಹಣ್ಣು ಮಾರುವವರಿಂದ ತೊಂದರೆಯಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ತಿಳಿಸಿದರು.
ಪಿ.ಎಸ್.ಐ ಪರಶುರಾಮ ಅವರು ಮಾತನಾಡಿ ವ್ಯಾಪಾರದ ಪೈಪೋಟಿಯಿಂದಾಗಿ ತಳ್ಳು ಗಾಡಿಯ ವ್ಯಾಪಾರಿಗಳು ರಸ್ತೆಯ ಪಕ್ಕಕ್ಕೆ ಬಂದು ನಿಲ್ಲುವ ಕಾರಣ ಗ್ರಾಹಕರು ರಸ್ತೆಯ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸಿ ಖರೀದಿಸುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರುವ ಕಾರಣ ಸಾರ್ವಜನಿಕರ ಹಿತಾದೃಷ್ಟಿಯಿಂದಾಗಿ ತಳ್ಳುಗಾಡಿಗಳನ್ನು ಹಿಂದಕ್ಕೆ ಸರಿಸಲಾಗಿದೆ.
ಬಸ್ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಸದಾ ಕಿರಿಕಿರಿಯಾಗುತ್ತಿದ್ದ ಪರಿಣಾಮ ಸಂಚಾರ ಸುಗಮಗೊಳಿಸಲಾಗಿದೆ.ಖಾಸಗಿ ಬಸ್ ನಿಲುಗಡೆಯ ತೆರವಿಗಾಗಿ ಸಂಬಂದಪಟ್ಟ ಸಾರಿಗೆ ಅಧಿಕಾರಿಗಳಿಂದ ದೂರು ಅಥವಾ ಮನವಿ ಸಲ್ಲಿಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
ಸರ್ಕಾರಿ ಬಸ್ ನಿಲ್ದಾಣದ ಹತ್ತಿರ ರಸ್ತೆಗೆ ಅಡ್ಡಲಾಗಿ ನಿಲ್ಲುವ ಖಾಸಗಿ ಬಸ್‌ಗಗಳಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುವ ಬಗ್ಗೆ ಸಾರ್ವಜನಿಕರು ಆರೋಪಿಸಿದರು.ಈ ಬಗ್ಗೆ ವ್ಯಪಸ್ಥಾಪಕ ತಿರುಮಲೇಶ ಅವರು ಪ್ರತಿಕ್ರಿಯಿಸಿ ನಿಲ್ದಾಣದ ಬಳಿ ನಿಲ್ಲುವ ಖಾಸಗಿ ಬಸ್‌ಗಳ ನಿಲುಗಡೆಯನ್ನು ತೆರವುಗೊಳಿಸುವಂತೆ ಈಗಾಗಲೇ ಮೂರು ಬಾರಿ ಮನವಿ ಮಾಡಲಾಗಿದ್ದು ಮತ್ತೊಮ್ಮೆ ಮನವಿ ಮಾಡಲಾಗುವುದೆಂದರು.
ವರದಿ .ಶ್ರೀನಿವಾಸ ನಾಯ್ಕ