ಚೇಳೂರು : -ಬುರುಡಗುಂಟೆ ಗ್ರಾಂ.ಪ ಮುಂದೆಯೇ ಜಲಬಾಧೆ ತೀರಿಸಿಕೊಳ್ಳುವ ರೈತರು ; ಮೂಲ ಸೌಲಭ್ಯದ ಕೊರತೆ:
ಆರೋಪ,ಚೇಳೂರು : ಬುರುಡಗುಂಟೆ ಗ್ರಾಂ ಪಂಚಾಯತಿ ಕೇಂದ್ರವಾದರೂ ಇಲ್ಲಿನ ಪಂಚಾಯತಿ ಮಾತ್ರ ತನ್ನ ಮೂಲ ಸ್ವರೂಪದಲ್ಲೇ ಉಳಿದಿದ್ದು, ರೈತರಿಗೆ ಇಂದಿಗೂ ಮೂಲ ಸೌಲಭ್ಯ ಇರದ ಕಾರಣ ಪಂಚಾಯತಿ ಕೆಲಸ ಕರ‍್ಯಗಳಿಗೆ ಹಾಗೂ ಇತರೆ ಕೆಲಸಕ್ಕೆ ಬಂದ ರೈತರು ಎಲ್ಲೆಂದರಲ್ಲೇ ಮೂತ್ರ ಬಾಧೆಯನ್ನು ತೀರಿಸಿಕೊಳ್ಳುವ ದೃಶ್ಯ ಕಂಡುಬರುತ್ತಿದೆ.
ನೂತನ ಚೇಳೂರು ತಾಲೂಕಿನ ವ್ಯಾಪ್ತಿಗೆ ಒಳಪಡುವ ಬುರುಡಗುಂಟೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಸಮುದಾಯ ಶೌಚಾಲಯ ಸಾರ್ವಜನಿಕರ ಬಳಕೆಗೆ ಯೋಗ್ಯವಿಲ್ಲದೆ ಸದಾ ಮುಚ್ಚಿದೆ. ಇದರಿಂದಾಗಿ ಸಾರ್ವಜನಿಕರು ಶೌಚಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಬುರುಡಗುಂಟೆ ಗ್ರಾಮ ಪಂಚಾಯಿತಿ ಕೇಂದ್ರವು ಪ್ರಸಿದ್ಧ ಗಂಗಮ್ಮ ದೇವಸ್ತಾನ ಹೊಂದಿದ್ದು ಅತ್ಯಂತ ಪ್ರಸಿದ್ಧಿ ಪಡೆದಿದ್ದು ಪೂಜಾ ದಿನಗಳಲ್ಲಿ ನೂರಾರು ಭಕ್ತದಿಗಳು ಬರುತ್ತಾರೆ. ಇದರ ವ್ಯಾಪ್ತಿಗೆ ೧೪ ಗ್ರಾಮಗಳು ಒಳಪಡಲಿದ್ದು,ಎಂಟು ಸಾವಿರಕ್ಕೂ ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ಬುರುಡಗುಂಟೆ ಹೃದಯಭಾಗ ಹೀಗಾಗಿ ಇಲ್ಲಿಯೇ ಬ್ಯಾಂಕ್, ಆಸ್ಪತ್ರೆ, ಶಾಲೆಗಳು, ವಿದ್ಯಾರ್ಥಿ ನಿಲಯ, ದಿನಸಿ ಅಂಗಡಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯೂ ಇದೆ. ಸಾರ್ವಜನಿಕರು ವ್ಯವಹಾರಕ್ಕಾಗಿ ನಿತ್ಯ ಬಂದು ಹೋಗುವುದೂ ಇದೆ. ಹೀಗೆ ಬರುವ ಸಾರ್ವಜನಿಕರು ಶೌಚಕ್ಕಾಗಿ ಪೊದೆಗಳ ಬಳಿ ಹೋಗುವುದು. ಬಸ್ ನಿಲ್ದಾಣದ ಹಿಂಭಾಗದ ಜಾಗದಲ್ಲಿ ಶೌಚ ಮಾಡುವುದು ಇತ್ತು.
ಇದರಿಂದಾಗಿ ಕೆಟ್ಟ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ೨೦೧೮-೨೦೧೯ನೇ ಸಾಲಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ೨ ಲಕ್ಷ ರೂ. ವೆಚ್ಚದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ.ಆದರೆ, ಅದು ಸಾರ್ವಜನಿಕರ ಬಳಕೆಗೆ ಯೋಗ್ಯವಿಲ್ಲದೆ ಮುಚ್ಚಿದೆ.
ಇದರಿಂದ ಗ್ರಾಂ.ಪ. ಕೇಂದ್ರ ಸ್ನಾನವಾದ ಬುರುಡಗುಂಟೆ ಗ್ರಾಮಕ್ಕೆ ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಸುತ್ತಮುತ್ತಲಿನಿಂದಾ ಬರುವ ಜನಸಂಖ್ಯೆ ಜಾಸ್ತಿಯಾಗಿದೆ. ಆದರೆ ಇಲ್ಲಿಗೆ ಬರುವ ರೈತರು ತಮ್ಮ ಮೂತ್ರ ಬಾಧೆ ತೀರಿಸಿಕೊಳ್ಳಲು ಗ್ರಾಂ ಪ ಎದುರಿಗೆ ಇರುವ ಸಮುದಾಯ ಶೌಚಾಲಯದ ಪಕ್ಕದ ಸಂದಿಯನ್ನು ಹಾಗೂ ದೂರದ ಪೊದೆಗಳು, ಗಿಡಗಂಟಿಗಳ ಬಳಿ ಹೋಗಬೇಕಾಗಿದೆ.
ನಿರ್ವಹಣೆ ಕೊರತೆ: ಸ್ವಚ್ಛ ಭಾರತ್ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಶೌಚಾಲಯ ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿದೆ. ಪುರುಷರ ಹಾಗೂ ಮಹಿಳೆಯರ ಶೌಚಾಲಯ ಗೃಹದ ಬಾಗಿಲು ಸದಾ ಬೀಗ ಹಾಕಿ ಮುಚ್ಚಲಾಗಿದೆ.ಇದು ಗ್ರಾಮ ಪಂಚಾಯಿತಿ ಎದುರಲ್ಲೇ ಇದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಸಾರ್ವಜನಿಕರ ಬಳಕೆಗೆ ಶೌಚಾಲಯ ಯೋಗ್ಯವಾಗಿಲ್ಲ ಎಂಬುದು ಪ್ರಜ್ಞಾವಂತರ ದೂರು.
ತೆರವು ಗೊಳಿಸಿದ ಪೆಟ್ಟಿಗೆ ಅಂಗಡಿಗಳು:ಗ್ರಾಂ ಪ ಎದುರಿಗೆ ಇರುವ ಸಮುದಾಯ ಶೌಚಾಲಯಕ್ಕೆ ಅಡ್ಡಲಾಗಿ ಇದೆ ಎಂದು ಪಿಡಿಒ ಹಾಗೂ ಅದ್ಯಕ್ಷರು ಸ್ಥಳೀಯ ಪೊಲೀಸರ ಬಂದೋ ಬಸ್ತ್ ಏರ್ಪಡಿಸಿ ತೆರವುಗೊಳಿಸಲಾಯಿತು.ಆದರೆ ತೆರವು ಗೋಲಿಸಿ ವರ್ಷ ಕಳೆಯುತ್ತಾ ಬಂದರೂ ಸಾರ್ವಜನಿಕರಿಗೆ ಗ್ರಾಂ ಪಂಚಾಯತಿ ಕೇಂದ್ರಕ್ಕೆ ಬರುವ ಹಾಗೂ ಇಲ್ಲಿನ ಜನರು ಗ್ರಾಂ ಪ ಎದುರಿಗೆ ಹಾಗೂ ಎಲ್ಲೆಂದರಲ್ಲಿ ಮೂತ್ರ ಮಾಡುವುದು ಪಿಡಿಒ ಹಾಗೂ ಅಧ್ಯಕ್ಷರಿಗೆ ಕಾಣುತ್ತಿಲ್ಲ.ಇದರಿಂದ ಸ್ವಚ್ಛ ಭಾರತ್ ಯೋಜನೆಯಡಿ ಮೂತ್ರಾಲಯವನ್ನು ನಿರ್ಮಿಸಿದ್ದು,ಇದಕ್ಕೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ಕೋಟ್,ಸಾರ್ವಜನಿಕರ ಅನುಕೂಲಕ್ಕಾಗಿ ಪಂಚಾಯಿತಿಯಿಂದ ಬುರುಡಗುಂಟೆ ಗ್ರಾಮದಲ್ಲಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಿರುವುದು ತುಂಬಾ ಅನುಕೂಲಕರ.ಆದರೆ ಪ್ರತಿ ಶನಿವಾರ ಸಂತೆ ನಡೆಯುತ್ತಿದ್ದು ಸಾರ್ವಜನಿಕ ಬಳಕೆಗೆ ಇರಬೇಕಾದ ಶೌಚಾಲಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಚ್ಚಿದ್ದು ಸಂತೆಗೆ ಬರುವ ಮಹಿಳೆಯರ ಪಾಡಂತೂ ನರಕಯಾತನೆ ಅನುಭವಿಸುವಂತಾಗಿದೆ.
ಶೀಲಾ- ವ್ಯಾಪಾರಿ ಮಹಿಳೆ-ಶೌಚಾಲಯ ಮುಂಬಾಗದಲ್ಲಿದ್ದ ಹಳೆಯ ಪೆಟ್ಟಿಗೆ ಅಂಗಡಿಗಳನ್ನು ತೆರವುಗೋಳಿಸಲಾಯಿತು,ಸ್ಥಳದಲ್ಲಿ ಮೊದಲು ಹಳೆ ಪೋಲಿಸ್ ಠಾಣೆ ಇತ್ತು,ಆದ್ದರಿಂದ ಜಾಗ ಪೋಲಿಸರಿಗೆ ಸಂಭದ್ದಪಟ್ಟಿದ್ದು,ಅವರು ಕಾಂಪೌಡ್ ಏನಾದರು ಕಟ್ಟುತ್ತಾರೆ,ಎಂಬುದು ಮಾಹಿತಿ ಇಲ್ಲಾ,ಶೌಚಾಲಯದ ಕೀ ಸಹ ನಮ್ಮ ಬಳಿ ಇಲ್ಲಾ ಎಂದು ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ.
– ಪನೀಂದ್ರ ಬುರುಡಗುಂಟೆ ಗ್ರಾಂ.ಪ. ಪಿಡಿಒ
ವರದಿ :ಯಾರಬ್. ಎಂ.