ಚಿಕ್ಕೋಡಿ:- ಸಂಗೊಳ್ಳಿ ರಾಯಣ್ಣ 2024 /14 ಗುರುವಾರ ರಂದು 226 ಸಂಗೊಳ್ಳಿ ರಾಯಣ್ಣಾ ಜಯಂತಿ ನಿಮಿತ್ಯ ಹಂದಿಗೊಂದು ಅಜ್ಜ ಅವರ ಹಸ್ತದಿಂದ ಜ್ಯೋತಿ ಪೂಜೆಯೊಂದಿಗೆ ಸಂಗೊಳ್ಳಿ ರಾಯಣ್ಣಾ ಯುವ ಘರ್ಜನೆ ಸಂಘಟನೆಯಿಂದ ಡೊಳ್ಳು ಬಾರಿಸುದರೊಂದಿಗೆ ಸುಮಾರು ಹತ್ತು ಹನ್ನೆರಡು ಜ್ಯೋತಿಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು.
ಹೌದು ಸಂಗೊಳ್ಳಿ ರಾಯಣ್ಣಾ ಯುವ ಘರ್ಜನೆ ಸಂಘಟನೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಎಸ್ ಪೂಜಾರಿ ಇವರ ನೇತೃತ್ವದಲ್ಲಿ ಹಲವಾರು ಕಡೆಗಳಿಂದ ಬಂದ ಜ್ಯೋತಿಯನ್ನು ಹಿಡಿದುಕೊಂಡು ಡೊಳ್ಳನ್ನು ಬಾರಿಸುವುದರೊಂದಿಗೆ ಚಿಕ್ಕೋಡಿ ಪ್ರವಾಸಿ ಮಂದಿರದಿಂದ ಬಸವ ಸರ್ಕಲ್ ಮಿನಿ ವಿಧಾನಸೌಧದ ಎದುರು ಇರುವ ಕನಕದಾಸ ಸ್ಮಾರಕಕ್ಕೆ ಹಾರು
ಹಾಗೂ ಜ್ಯೋತಿ ಬೆಳಗುವುದರೊಂದಿಗೆ ನಂತರ ನಂತರ ಬಸವೇಶ್ವರ್ ಸ್ಮಾರಕಕ್ಕೆ ಜ್ಯೋತಿ ಬೆಳಗಿ ನಂತರ ಅಂಕಲಿಕೋಟದವರೆಗೆ ಮೆರವಣಿಗೆ ಮಾಡಿ ಮುಕ್ತಾಯಗೊಳಿಸಲಾಯಿತು.
ಈ ಒಂದು ಸಂಗೊಳ್ಳಿ ರಾಯಣ್ಣ ಚಿಕ್ಕೋಡಿ ಬಸ್ ಸ್ಟ್ಯಾಂಡಿಗೆ ನಾಮಫಲಕ ಹಾಗೂ ಚಿಕ್ಕೋಡಿಯಲ್ಲಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಸ್ಥಾಪನೆ ಇನ್ನೂ ಹಲವು ಹಾಲುಮತ ಕುರುಬರ ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಅಧ್ಯಕ್ಷರಾದ ಸಂತೋಷ್ ಪೂಜಾರಿ ಮತ್ತು ಸಂಘಟನೆಯ ಮುಖ್ಯಸ್ಥರು ಮಾತನಾಡಿದರು.
ಈ ಎಲ್ಲ ಜ್ಯೋತಿಗಳು ನoನದಿವಾಡಿ ಸಿದ್ದಾಪುರವಾಡಿ ಕಾಡಾಪುರ್ ನಂದಿಕುರಳಿ ಕೆರೂರ್ ಯಕ್ಸಂಬಾ ಇನ್ನು ಹಲವು ಗ್ರಾಮಗಳಿಂದ ಬಂದು ಮತ್ತು ನೂರಾರು ಕಾರ್ಯಕರ್ತಗಳೊಂದಿಗೆ ಈ ಭವ್ಯ ಕಾರ್ಯಕ್ರಮಕ್ಕೆ ಹಾದರಿದ್ದರು.
ಈ ಮೆರವಣಿಗೆಯ ಸಂದರ್ಭದಲ್ಲಿ ಶ್ರೀಮಂತ ಅಜ್ಜಾ ಅಂದಿಗುಂದ, ಅಜಯ ಕವಟಿಗಿಮಠ, ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಎಸ್ ಪೂಜಾರಿ, ಭಾರತ ವೈಭವ ಪತ್ರಕರ್ತರಾದ ರಾಜು ಮುಂಡೆ, ಸುದರ್ಶನ್ ಚಾನೆಲ್ ರಿಪೋರ್ಟರ್ ಪರಮೇಶ್ ಬಿಂದ, ಪವರ್ ಟೈಮ್ಸ್ ಸಂಪಾದಕರು ಕುಮಾರ್ ಪಾಟೀಲ, ಜೆ ಜೆ ನ್ಯೂಸ್ ರಿಪೋರ್ಟರ್ ಪ್ರಶಾಂತ ಗಸ್ತಿ, ಅರ್ಜುನನ ಸಂದೇಶ ಪತ್ರಿಕೆಯ ಸಂಪಾದಕರು ಅರ್ಜುನ್ ಪೂಜಾರಿ, ನ್ಯಾಯವಾದಿಗಳು ಬಿಎಸ್ ಪಾಟೀಲ್, ಲಖನ್ ಸಿಂಗಾಡಿ, ವಿನಯ್ ಗಾಡಿಗೆ , ಕಲ್ಲಪ್ಪಾ ಕಟ್ಟಿಕರ್, ಇನ್ನುಳಿದ ಎಲ್ಲ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಈ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಿತು.
ವರದಿ :-ರಾಜು ಮುಂಡೆ