ಚೇಳೂರು :-78ನೇ ಸ್ವಾತಂತ್ರ ದಿನಾಚರಣೆಯನ್ನು ಮುಸ್ಲಿಂ ಬಾಂಧವರೆಲ್ಲರೂ ಸೇರಿ ಜಾಮಿಯಾ ಮಸೀದಿಯ ಮುಂದೆ ಸೇರಿ ಚೇಳೂರು ದಂಡಧಿಕಾರಿಗಳಾದ ಶ್ರೀನಿವಾಸ್ ನಾಯ್ಡು ರವರನ್ನು ಸ್ವಾಗತಿಸಿ ಬರ ಮಾಡಿಕೊಂಡು ಧ್ವಜಾರೋಹಣವನ್ನು ಮಾಡಿ ಕೊಂಡರು ನಂತರ ರಾಷ್ಟ್ರ ಗೀತೆಯನ್ನು ಹಾಡಿ ಉಚಿತವಾಗಿ ಸಾರ್ವಜನಿಕರಿಗೆ ಅನುಕೂಲವಾಗಲು ಯಾವುದೇ ಬೇದ -ಬಾವವಿಲ್ಲದೆ ಎಲ್ಲರು ಸದಾ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.
ಆಂಬುಲೆನ್ಸ್ ಗೆ ದಂಡಧಿಕಾರಿಗಳು ಚಾಲನೆ ನೀಡಿ ಟೇಪ್ ಕತ್ತರಿಸಿದರು ಹಾಗೂ ಸೇವಾ ಸಿಂಧು ಕೇಂದ್ರವನ್ನು ಪ್ರಾರಂಭಮಾಡಲು ಸಹ ಟೇಪ್ ಕತ್ತರಿಸಿದರು, ಸಿಹಿ ಹಂಚಲಾಯಿತು, ಹಾಗೂ ಊಟದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ದಂಧಿಕಾರಿಗಳಾದ ಶ್ರೀನಿವಾಸ್ ನಾಯ್ಡು, ಈಶ್ವರ್, ಜಾಮಿಯಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ನೂರ್ ಅಹ್ಮದ್, ಬುಲೆಟ್ ಬಾಬು, ಮಹಮ್ಮದ್ ಗೌಸ್, ಸತ್ತರ್ ಸಾಬ್,ರಿಜ್ವಾನ್ ಮುಜಾಮಿಲ್ ಹಾಗೂ ಇನ್ನು ಮುಸ್ಲಿಂ ಯುವ ಬಳಗದವರು ಹಾಜರಿದ್ದರು.
ವರದಿ : ಯಾರಬ್. ಎಂ.