Ad imageAd image

ಗ್ಯಾರಂಟಿ ಯೋಜನೆಯನ್ನು ಸಮರ್ಥಿಸಿಕೊಂಡ ಸಚಿವ ದರ್ಶನಾಪುರ್

Bharath Vaibhav
ಗ್ಯಾರಂಟಿ ಯೋಜನೆಯನ್ನು ಸಮರ್ಥಿಸಿಕೊಂಡ ಸಚಿವ ದರ್ಶನಾಪುರ್
WhatsApp Group Join Now
Telegram Group Join Now

ಯಾದಗಿರಿ : -ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಹೈದರಾಬಾದ್ ಕರ್ನಾಟಕ ಈ ಭಾಗದ ಅನೇಕ ಬಡತನ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿದಂತಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕರ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಸರ್ಕಾರ ಸಾಧನೆಗಳನ್ನು ಕೊಂಡಾಡಿದರು.

ಗುರುವಾರ ಯಾದಗಿರಿ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆ ಶಕ್ತಿ ಯೋಜನೆ ಗ್ರಹಜ್ಯೋತಿ ಯೋಜನೆ ಇನ್ನು ಸರ್ಕಾರದ ಬಡವರ ಪರವಾಗಿ ಕಾರ್ಯಕ್ರಮಗಳು ನೀಡುವ ಮೂಲಕ 1 ಲಕ್ಷ ಕಿಂತ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟರು ಈ ಒಂದು ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮುದ್ದು ಮಕ್ಕಳ ಭರತನಾಟ್ಯ ದೇಶಭಕ್ತಿ ಗೀತೆಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ಗನ್ಯಾಯಕರ ವೇಷ ಭೂಷಣಗಳನ್ನು ತೊಟ್ಟು 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಮೆರುಗು ತಂದರು ಜಿಲ್ಲಾಧಿಕಾರಿಗಳಂತ ಸುಶೀಲಾ ಬಿ ಅಪಾರ ಜಿಲ್ಲಾಧಿಕಾರಿಗಳಂತ ಶರಣಬಸಪ್ಪ ಕೋಟೆಪ್ಪಗೋಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದಂತ ಗರೀಮಾ ಪನ್ವರ್ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಜೀ ಸಂಗೀತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ವರ್ಗ ಶಾಲೆಯ ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅನೇಕ ಯುವಕರು ಒಂದು ಕ್ವಿಂಟಲ್ ಹೆಚ್ಚು ತೂಕ ಇರುವ ಸಾಮಗ್ರಿಗಳನ್ನು ಎತ್ತುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದರು ಇದಕ್ಕೂ ಮೊದಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ ಸಂಚಲನ ಮಾಡುವ ಮೂಲಕ ಸಚಿವರಿಗೆ ಮತ್ತು ಗಣ್ಯ ವ್ಯಕ್ತಿಗಳಿಗೆ ಅಚ್ಚುಕಟ್ಟಾಗಿ ಗೌರವ ಸಮರ್ಪಣೆ ಅರ್ಪಿಸಿದರು ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನೀಡಿದ ಮುದ್ದು ವಿದ್ಯಾರ್ಥಿ ವರ್ಗಕ್ಕೆ ಹಾಗೂ ಕಂದಾಯ ಇಲಾಖೆಯ ಆಧಾರ್ ಲಿಂಕ್ ನಲ್ಲಿ ಸಾಧನೆಗೈದ ಸಾಧಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅತಿ ವಿದ್ಯಾರ್ಥಿ ಗಳಿಗೆ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಸ್ಥಳೀಯ ಶಾಸಕರಾದ ಚನ್ನರಡ್ಡಿ ಪಾಟೀಲ್ ತುನ್ನೂರು ಗೈರು ಆಗಿರುವುದು ಎದ್ದು ಕಾಣುತ್ತಿತ್ತು

  ವರದಿ:-ಮಲ್ಲಿಕಾರ್ಜುನ ದೋಟಿಹಾಳ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!