ರಾಮನಗರ:-ಕರ್ನಾಟಕ ರಾಜ್ಯದ ಅತ್ಯಂತ ನೈಸರ್ಗಿಕವಾಗಿ ಹಾಗೂ ಪ್ರವಾಸೋದ್ಯಮವಾಗಿ ಅತ್ಯಂತ ಪ್ರಮುಖ ಜಿಲ್ಲೆ ಉತ್ತರ ಕನ್ನಡ. ಈ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಜೋಯ್ಡಾ, ಈ ಜೋಯ್ಡಾ ತಾಲ್ಲೂಕಿನ ಕೊನೆ ಗಡಿ ದೊಡ್ಡ ಪಟ್ಟಣ ರಾಮನಗರ. ಈ ರಾಮನಗರದ ಮೂಲಕ ನೆರೆಯ ಗೋವಾ ರಾಜ್ಯಕ್ಕೂ ಹಾಗೂ ಪಕ್ಕದ ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ನೇರ ಸಂಪರ್ಕ ವಿದೆ.
ಆದ್ರೇ ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲಾ. ಇಲ್ಲಿ 2016 ನೇ ಇಸವಿಯಿಂದ ರಾಮನಗರದಿಂದ ಕೇವಲ 3 ಕಿಲೋಮೀಟರ್ ದೂರದ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಭೂಮಿಯಲ್ಲಿ ಕಲ್ಲು ಕ್ರಷರ್ ಕ್ವಾರಿಗಳ ಚಟುವಟಿಕೆಗಳಿಂದ ಸುತ್ತ ಮುತ್ತಲಿನ ರೈತರಿಗೆ ತೊಂದರೆ ಆಗ್ತಾ ಇದೆ ಎನ್ನುವುದು ಈ ಭಾಗದ ರೈತರ ಆರೋಪ, ಇನ್ನೊಂದು ಕಡೆ ಸ್ಥಳೀಯ ರಾಮನಗರ ಪಟ್ಟಣಕ್ಕೂ ಸಹ ಈ ಕಲ್ಲು ಕ್ವಾರಿಗಳ ಸ್ಪೋಟಗಳಿಂದ ದಿನ ನಿತ್ಯ ಭೂಮಿ ಗಡ ಗಡ ನಡು ಗುತ್ತದೆಯಂತೆ… ಇನ್ನೂ ದಿನ ನಿತ್ಯ ಕ್ರಷರ್ ಗಳ ಸ್ಪೋಟಗಳಿಂದ ಬರುವ ದೂಳಿಂದ ರೈತರು ಬೆಳೆಯುತ್ತಿರುವ ಬೆಳೆಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿವೆ ಎನ್ನುತ್ತಾರೆ.
ಇಲ್ಲಿನ ಸ್ಥಳೀಯ ರೈತರು. ಇನ್ನೊಂದು ಕಡೆ ಇಲ್ಲಿರುವ ಕ್ರಷರ್ ಗಳ ಮಾಲೀಕರನ್ನು ಕೇಳಿದ್ರೆ ನಮ್ಮ ಕ್ರಷರ್ ಗಳಿಂದ ತೊಂದರೆ ಆಗ್ತಾ ಇಲ್ಲಾ, ಸಣ್ಣ ಪುಟ್ಟ ಸಮಸ್ಯೆಗಳಿದ್ರೆ ಸರಿ ಪಡಿಸುತ್ತೇವೆ ಎನ್ನುತ್ತಾರೆ ಇಲ್ಲಿನ ಕ್ವಾರಿಗಳ ಮಾಲೀಕರು. ಆದ್ದರಿಂದ ಇಲ್ಲಿನ ರೈತರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಈ ರಾಮನಗರದ ಕ್ವಾರಿ ಕಲ್ಲು ಕ್ರಷರ್ ಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸ್ಥಳೀಯ ರೈತರ ಅಭಿಪ್ರಾಯ ಸಂಗ್ರಹ ಮಾಡಿ ಈ ಕ್ಷೇತ್ರದ ಶಾಸಕರು ಆದ ಆರ್.ವಿ ದೇಶಪಾಂಡೆ ಹಾಗೂ ಜೋಯ್ಡಾ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಆದ ವೀಣಾ ಬಿಡಿಕರ್ ಅವರ ಗಮನಕ್ಕೆ ತೆಗೆದುಕೊಂಡು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಕ್ವಾರಿಗಳಿಂದ ಬರುವ ಧೂಳಿನಿಂದ ರೈತರ ಬೆಳೆಗಳನ್ನು ರಕ್ಷಿಸುವ ಕೆಲಸ ಅಧಿಕಾರಿಗಳು ಮಾಡುವರೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:- ಬಸವರಾಜು.