ಸಿರುಗುಪ್ಪ : -ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ನಗರಸಭೆಗಳ ಸಹಯೋಗದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಶಾಸಕ ಬಿ.ಎಮ್.ನಾಗರಾಜ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲೂಕಾಧ್ಯಕ್ಷ, ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಧ್ವಜಾರೋಹಣ ನೆರವೇರಿಸಿದರು.
ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ ನಮ್ಮ ದೇಶವನ್ನು ಸ್ವತಂತ್ರಗೊಳಿಸಲು 1857 ರಿಂದ 1947 ರವರೆಗೆ ಹೋರಾಡಿದ ನಮ್ಮ ನಾಯಕರು ರಕ್ತವನ್ನು ಸುರಿಸಿದ್ದಾರೆ. ಅಂತಹ ಮಹಾನ್ ನಾಯಕರ ಹೋರಾಟದ ಫಲವಾಗಿ ನಮ್ಮ ದೇಶವು ವಿಶ್ವದಲ್ಲಿ ಅಭಿವೃದ್ದಿ ದೇಶವಾಗಿ ಹೊರಹೊಮ್ಮಿದ್ದು ಸ್ವತಂತ್ರಕ್ಕಾಗಿ ತ್ಯಾಗ ಬಲಿದಾನಗೈದ ಹುತಾತ್ಮರನ್ನು ಮಹಾತ್ಮರನ್ನು ನೆನಪಿಸಿಕೊಂಡು ಸ್ಮರಿಸಬೇಕಿದೆಂದರು.ಶಾಸಕ ಬಿ.ಎಮ್.ನಾಗರಾಜ ಅವರು ಮಾತನಾಡಿ ಈ ಭಾಗದ ಜೀವನದಿಯೆಂದು ಕರೆಯುವ ತುಂಗಾಭದ್ರ ನದಿಯ ಜಲಾಶಯದ 19ನೇ ಗೇಟ್ ಕಿತ್ತುಹೋಗಿರುವ ಬಗ್ಗೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು ಜಲಾಶಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಆವರಣದ ಸುತ್ತ ಪೆರೇಡ್ ನಡೆಸಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನದ ಮೂಲಕ ಶಾಸಕರು, ತಹಶೀಲ್ದಾರರು, ಡಿವೈಎಸ್‌ಪಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ ಗೌರವ ಸ್ವೀಕರಿಸಿದರು.ನಗರದ 7,8ನೇ ವಿಭಾಗದ ಶಾಲೆಯ ನರ್ಸರಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಪಥಸಂಚಲನ, ಸಾಹಸ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಪವನ್‌ಕುಮಾರ್.ಎಸ್.ದಂಡಪ್ಪನವರ್, ಅಬಕಾರಿ ಇಲಾಖೆ ನಿರೀಕ್ಷಕಿ ಕೀರ್ತನಾ, ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಟ್ಟೂರು ಕರಿಬಸಪ್ಪ, ದೈಹಿಕ ಪರಿವೀಕ್ಷಕ ರಮೇಶ, ಇನ್ನಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವರದಿ:- ಶ್ರೀನಿವಾಸ ನಾಯ್ಕ