ಸೇಡಂ:- ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಚೌಕಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.ಈ ಕಾರ್ಯಕ್ರಮದಲ್ಲಿ ವೀರಶೈವ ಕಲ್ಯಾಣ ಮಂಟಪದ ಅಧ್ಯಕ್ಷರು/ ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷರು ಶಿವಯ್ಯ ಸ್ವಾಮಿ ಸಿದ್ದಯ್ಯ ಸ್ವಾಮಿ ಬಿಬ್ಬಳ್ಳಿ ಅವರು ರಿಬ್ಬಿನ ಕಟ್ ಮಾಡುವ ಮೂಲಕ ಉದ್ಘಾಟಿಸಿ ಪೊಮೂಲಕ ಠಾಣೆಯ ಆರಕ್ಷಕ ಉಪನಿರೀಕ್ಷಕರು ಮಂಜುನಾಥ್ ರೆಡ್ಡಿ ಅವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಸೇಡಂ ಯೋಜನಾಧಿಕಾರಿ ಮತ್ತು ಜಿಲ್ಲಾ ಜನ ಜಾಗ್ರತಿ ವೇದಿಕೆಯ ಎಲ್ಲ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದರು ಮತ್ತು ಸೇಡಂ ಯೋಜನಾಧಿಕಾರಿಗಳು ಮಂಜುನಾಥ್ ಎಸ್.ಜಿ ರವರು ಸೇಡಂ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಸಹಕಾರಿಯಾಗುವಂತೆ ಅವರು ಬೇಡಿಕೆ ಇಟ್ಟಾಗ ಅದನ್ನು ಮಂಜೂರಾತಿ ಪಡೆದುಕೊಂಡು ಈ ದಿನ ಪೊಲೀಸ್ ಚೌಕಿ ಹಸ್ತಾಂತರ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಾದ ನಿರಗತಿಕರಿಗೆ ವಾತ್ಸಲ್ಯ ಮನೆ, ನಿರ್ಗತಿಕರಿಗೆ ಮಾಶಾಸನ, ಶಾಲೆಗಳಿಗೆ ಡಸ್ಕೋ ಬೆಂಚು, ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಕೆರೆ ಹೊಳೆತ್ತುವದು, ಸುಜ್ಞಾನ ನಿಧಿ ಶಿಷ್ಯವೇತನ, ಶುದ್ಧ ನೀರಿನ ಘಟಕ ಸಮುದಾಯ ಅಭಿವೃದ್ಧಿ ವಿಭಾಗದ ಅಡಿಯಲ್ಲಿ ದೇವಸ್ಥಾನಗಳು ಜೀರ್ಣೋದ್ಧಾರ ಮತ್ತು ಇನ್ನಿತರ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಸೇಡಂ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಮಂಜುನಾಥ್ ರೆಡ್ಡಿ ಅವರು ನನಗೆ ನಿರಂತರ ಐದು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಮಾತನಾಡಿದರು.ಸಂಸ್ಥೆವು ಸರ್ಕಾರಿ ಇಲಾಖೆಗಳು ಮಾಡುವಂತಹ ಕೆಲಸಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರು ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರು ರಾಜು ನೀಲಂಗಿ , ವರದಾ ಸ್ವಾಮಿ ಬಿ ಹೀರೆಮಠ ಬಟಗೇರಾ. ಶಿವಕುಮಾರ್ ಜಾಡರ್, ಭಾಗ್ಯಲಕ್ಷ್ಮಿ ನಾಯ್ಕೊಡೆ, ಶುದ್ಧ ಗಂಗಾ ಯೋಜನಾಧಿಕಾರಿಗಳು ಫಕೀರಪ್ಪ ಶುದ್ಧಗಂಗಾ ಮೇಲ್ವಿಚಾರಕರು ನವೀನ್, ಪೊಲೀಸ್ ಚೌಕಿ ತಯಾರಕರು ಅನಿಲ್,ವಲಯದ ಮೇಲ್ವಿಚಾರಕರು ಬಸಮ್ಮ ಹೂಗಾರ್, ಅಶ್ಪಾಕ್ ತಾಲೂಕಿನ ಕೃಷಿ ಮೇಲ್ವಿಚಾರಕರು ರಾಹುಲ್ ಹಾಗೂ ಸೇವಾ ಪ್ರತಿನಿಧಿಗಳು ಅಂಬಿಕಾ, ಮೇಘಾ, ಅನಿತಾಸಿಂಗ್, ರೇಣುಕಾ,ಕಾವೇರಿ ಉಪಸ್ಥಿತರಿದ್ದು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.