ಹುಬ್ಬಳ್ಳಿ:-ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿರುವ ನಿರಂತರ ತಾಂತ್ರಿಕ ಶಿಕ್ಷಣ ಘಟಕ (ಸಿಸಿಟೆಕ್) ವಿಭಾಗದಲ್ಲಿ ನಿರುದ್ಯೋಗಿ ಯುವತಿಯರಿಗಾಗಿ ಬ್ಯುಟಿಷಿಯನ್, ಫ್ಯಾಷನ್ ಡಿಸೈನಿಂಗ್, ಅರಿವರ್ಕ್ ಎಂಬ್ರಾಯಡರಿ, ಬಟ್ಟೆ ಬ್ಯಾಗ್ ತಯಾರಿಕೆಯ ಅಲ್ಪಾವಧಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಗಸ್ಟ್ ತಿಂಗಳಲ್ಲಿ ತರಬೇತಿಗಳು ಪ್ರಾರಂಭವಾಗಲಿವೆ. ಎಸ್.ಎಸ್.ಎಲ್.ಸಿ ಉತ್ತೀರ್ಣ, ಅನುತ್ತೀರ್ಣರಾದ ಯುವತಿಯರು ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಸಿಸಿಟೆಕ್ ವಿಭಾಗದ ವ್ಯವಸ್ಥಾಪಕರ ಕೊಠಡಿ ನಂ.103, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ವಿದ್ಯಾನಗರ, ಹುಬ್ಬಳ್ಳಿ ಅಥವಾ ದೂರವಾಣಿ ಸಂಖ್ಯೆ 9480725166, 9108142320 ಸಂಪರ್ಕಿಸುವಂತೆ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಗಣಪತಿ ಹೆಳವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:- ನಿತೀಶಗೌಡ ತಡಸ ಪಾಟೀಲ್