ಮೊಳಕಾಲುರು:- ಪಟ್ಟಣದಲ್ಲಿ ಶನಿವಾರ ಸ್ವಕುಳಸಾಳಿ ಸಮುದಾಯದವರು ತಮ್ಮ ಕುಲ ದೇವರಾದ ಶ್ರೀ ಜಿಹೇಶ್ವರ ಸ್ವಾಮಿ,ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಜಯಂತೋತ್ಸವದ ಪ್ರಯುಕ್ತ ಜಿಹೇಶ್ವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಆಗಸ್ಟ್ 5 ರಿಂದ ಪ್ರಾರಂಭವಾದ ಜಯಂತೋತ್ಸವ ಕಾರ್ಯಕ್ರಮಕ್ಕೆ ಶನಿವಾರ
ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಕಾರ್ಯಕ್ರಮ
ಹಮ್ಮಿಕೊಳ್ಳುವುದರ ಮೂಲಕ ತೆರೆ ಬಿದ್ದಿತು.
ಗಂಗಾ ಪೂಜೆ, ಅಗ್ನಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಶಿವ ಸಹಸ್ರ ನಾಮಾವಳಿ, ಮಾತೆಯರಿಂದ
ತೊಟ್ಟಿಲು ಉತ್ಸವ ಸೇರಿದಂತೆ ನಾನಾ ಧಾರ್ಮಿಕ ಆಚರಣೆಗಳನ್ನು ನಡೆಸಲಾಯಿತು. ಉತ್ಸವದಲ್ಲಿ ಸ್ವಕುಳಸಾಳಿ
ಸಮಾಜ, ಜಿಹೇಶ್ವರ ಯುವಕ ಸಂಘ, ಕೆಳಗಿನ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ದುರ್ಗಾ ದೇವಿ
ಮಹಿಳಾ ಮಂಡಳಿ ಹಾಗೂ ಸ್ವಕುಳಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು
ಭಾಗವಹಿಸಿದ್ದರು.
ಶನಿವಾರ ಬೆಳಿಗ್ಗೆ ಸಮುದಾಯದ ಮಹಿಳೆಯರು ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ ತೊಟ್ಟಿಲು ಉತ್ಸವ
ಹಮ್ಮಿಕೊಂಡು ನಾನಾ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದರು. ಆನಂತರ ಯುವತಿಯರು ಹಾಗೂ
ಮಹಿಳೆಯರು ಮೆರವಣಿಗೆಯುದ್ದಕ್ಕೂ ನೃತ್ಯ ಮಾಡುತ್ತಾ ಸಾಗುತ್ತಿದ್ದರು. ಉಳಿದ ಮಹಿಳೆಯರು ಕಳಸ,
ಕುಂಭಹೊತ್ತು ಸಾಗುತ್ತಿದ್ದರು.
ಮೊಳಕಾಲುರು ಮುಖ್ಯ ರಸ್ತೆಯಲ್ಲಿ
ಶನಿವಾರ ಸ್ವಕುಳಸಾಳಿ ಸಮುದಾಯದವರು ಜಿಹೇಶ್ವರ ಸ್ವಾಮಿ
ಜಯಂತೋತ್ಸವದ ಪ್ರಯುಕ್ತ ಸ್ವಾಮಿಯ ಭಾವಚಿತ್ರವನ್ನು ವಿಜೃಂಭಣೆಯಿಂದ ಮೆರವಣಿಗೆ ನಡೆಸಿದರು.
ಈ ಕಾರ್ಯಕ್ರಮಕ್ಕೆ ಸಮಾಜದ ಮುಖಂಡರುಗಳು , ಯುವಕರು,ಯುವತಿಯರ ವಿದ್ಯಾರ್ಥಿಗಳು ಮಾತೆಯರು ಹಾಗೂ ಅನೇಕ ಸಾರ್ವಜನಿಕರು ಭಕ್ತಾದಿಗಳು ಬಂದು ಸ್ವಾಮಿಯ ಸೇವೆ ಮಾಡಿ ಜಯಂತೋತ್ಸವವನ್ನು ವಿಜ್ರಂಭಣೆಯಿಂದ ಮಾಡಿದರು.
ವರದಿ :-ಪಿಎಂ ಗಂಗಾಧರ