ಹವ್ಯಾಸಗಳು ಎಂಬುದು ಪ್ರತಿಯೊಬ್ಬರಲ್ಲಿಯೂ ಸರ್ವೇ ಸಾಮಾನ್ಯ. ಕೆಲವರು ಟೈಮ್ ಪಾಸ್ ಗಾಗಿ ಕೆಲವು ಹವ್ಯಾಸಗಳನ್ನು ಬೆಳೆಸಿಕೊಂಡರೆ,ಇನ್ನೂ ಕೆಲವರು ಹವ್ಯಾಸವನ್ನೇ ಜೀವನವನ್ನಾಗಿಸಿಕೊಂಡಿರುತ್ತಾರೆ. ಇದೇ ರೀತಿ ತಮ್ಮ ಹವ್ಯಾಸದಿಂದಲೇ ದಾಖಲೆ ಸೃಷಿಸಿದ್ದಾರೆ.
ಸ್ಪೇನ್ ಮೂಲದ ವೆನ್ಸೆಸ್ ಎಂಬ ವ್ಯಕ್ತಿ ವಿವಿಧ ಬಗೆಯ ಯುನಿಕ್ ಮೊಬೈಲ್ ಫೋನ್ ಗಳ ಕಲೆಕ್ಷನ್ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಹಳೆ ಮಾದರಿಯ ಕೀಪ್ಯಾಡ್ ನೋಕಿಯಾ ಮೊಬೈಲ್ ನಿಂದ ಇಂದಿನ ಆಧುನಿಕ ಸ್ಮಾರ್ಟ್ ಫೋನ್ ವರೆಗೂ ಎಲ್ಲಾ ಬಗೆಯ ಮೊಬೈಲ್ ಕಲೆಕ್ಷನ್ ಇವರ ಬಳಿ ಇದೆ.
ಆ ಮೂಲಕ ಬರೋಬ್ಬರಿ 3,615 ಬಗೆಯ ಮೊಬೈಲ್ ಯುನಿಕ್ ಫೋನ್ ಗಳನ್ನು ಇವರು ಹವ್ಯಾಸದ ರೂಪದಲ್ಲಿ ಸಂಗ್ರಹಿಸಿದ್ದಾರೆ. ಹೀಗಾಗಿ ವಿಶ್ವದಲ್ಲಿಯೇ ಅತಿ ಹೆಚ್ಚು ಮೊಬೈಲ್ ಸಂಗ್ರಹಿಸಿರುವ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.