ಧಾರವಾಡ:-ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ವಿಚಾರಣೆಗೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅನುಮತಿ ನೀಡಿದ ಮಾತ್ರಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆನ್ನುವ ನಿಯಮ ಎಲ್ಲಿಯೂ ಇಲ್ಲ.
ಸದ್ಯಕೆ ಆ ಪ್ರಶ್ನೆ ಉದ್ಭವಿಸುವುದು ಇಲ್ಲ ಎಂದು ಕಾನೂನು ತಜ್ಞರ ಹೇಳಿದ್ದಾರೆ. ಇದನ್ನಾದರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸುದ್ದಿಗೋಷ್ಠಿ ನಡೆಸಿದ್ದಾರೆ. ಹಾಗೂ ಅವರು ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದಿದ್ದಾರೆ ಆದರೂ ಬಿಜೆಪಿ ವಿನಾಕಾರಣ ರಾಜನಾನಿಗೆ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಶಿಕ್ಷಕ ಘಟಕದ ರಾಜ್ಯಾಧ್ಯಕ್ಷರಾದ ಬಸವರಾಜ್ ಗುರಿಕಾರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಆಡಳಿತರೂಡ ಕಾಂಗ್ರೆಸ್ ವಾದಿಸುವ ಪ್ರಕಾರ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಬೇಕಾದರೆ, ಆ ಬಗ್ಗೆ ಯಾವುದಾದರೂ ಸಂಸ್ಥೆ ತನಿಖೆ ನಡೆಸಿ ಆರೋಪಿ ಪಟ್ಟಿ ಸಲ್ಲಿಸಬೇಕು. ಆದರೆ ಇಲ್ಲಿ ಅಂತ ಯಾವುದೇ ಪ್ರಸಂಗ ಎದುರಾಗದಿಲ್ಲದಿರುವಾಗ ರಾಜ್ಯಪಾಲರು ಅನುಮತಿ ನೀಡಿರುವುದು ತಪ್ಪು.
ಕಾಂಗ್ರೆಸ್ನ ಈ ಪ್ರಶ್ನೆಗೆ ಮೌನವಾಗಿ ಉತ್ತರ ನೀಡಿರುವ ರಾಜ್ಯಪಾಲರು ಟಿ ಜೆ ಅಬ್ರಾಹಂ ನಂಬುವರ ಖಾಸಗಿ ದೂರನಾದರಿಸಿ ವಿಚಾರಣೆಗೆ ಅನುಮತಿ ನೀಡಿದ್ದು ಸರಿಯಲ್ಲ ಎಂದಿದ್ದಾರೆ.
ಇಂತಹ ಅನೇಕ ಪ್ರಶ್ನೆಗಳ ಮಧ್ಯೆ ರಾಜ್ಯ ಸರ್ಕಾರ ತುರ್ತು ಸಚಿವ ಸಂಪುಟ ಸಭೆ ನಡೆಸಿ ರಾಜ್ಯಪಾಲರ ನಡೆ ವಿರುದ್ಧ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದೆ. ಅಂದರೆ ಈ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ನೇರ ಕಾನೂನು ಹೋರಾಟ ಮಹೂರ್ತ ನಿಗದಿಯಾದಂತಾಗಿದೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಬಸವರಾಜ್ ಗುರಿಕಾರ ಅವರು ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ.
ವರದಿ: ವಿನಾಯಕ ಗುಡ್ಡದಕೇರಿ