ಗೋಕಾಕ : -ಸಿಎಂ ವಿರುದ್ದ ಪ್ರೊಸುಕ್ಯೂಷನಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡಿಸಿ ಗೋಕಾಕದ ಬಸವೇಶ್ವರ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೆ ಕಪ್ಪು ಚುಕ್ಕೆ ಹೊಂದಿಲ್ಲ, ಆದರೆ ಒಂದು ವರ್ಷದಿಂದ ಅನುಮತಿ ಕೇಳಿದ್ದ ಪ್ರಕರಣಗಳು ಬಾಕಿ ಇದ್ದಾಗ ಕೇಂದ್ರ ಸರಕಾರದ ಕೈಗೊಂಬೆಯಾಗಿ ರಾಜ್ಯಪಾಲರು ತರಾತುರಿಯಲ್ಲಿ ಸಿದ್ದರಾಮಯ್ಯನವರ ವಿರುದ್ದ ಪ್ರೋಶುಕ್ಯೂಶನಗೆ ಅನುಮತಿ ನೀಡಿದ್ದು ಸರಿಯಲ್ಲ, ಇದು ಉದ್ದೇಶ ಪೂರ್ವಕವಾಗಿ ಮಾಡಲಾಗಿದೆಯೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಡಾ: ಮಹಾಂತೇಶ ಕಡಾಡಿ ಇವರು ಮಾತನಾಡಿ ಪದೆ ಪದೆ ಸಿದ್ದರಾಮಯ್ಯನವರ ರಾಜಿನಾಮೆ ಕೇಳುವ ಶಾಸಕ ರಮೇಶ ಜಾರಕಿಹೋಳಿಯವರ ಮೇಲೆ ಹಲವಾರು ಪ್ರಕರಣಗಳಿದ್ದವರು ರಾಜಿನಾಮೆ ಕೇಳುವ ನೈತಿಕತೆ ಪಾಠ ಮಾಡುತಿದ್ದಾರೆ.ಒಂದು ವೇಳೆ ಸಿದ್ದರಾಮಯ್ಯನವರು ರಾಜಿನಾಮೆ ನೀಡಿದರೆ ಹಲವಾರು ಯುವಕರು ಅತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪಾದಯತ್ರೆ ಮುಖಾಂತರ ತಹಸಿಲ್ದಾರ ಕಚೇರಿಗೆ ತೆರಳಿ ರಾಜ್ಯಪಾಲರ ನಡೆ ವಿರುದ್ದ ರಾಷ್ಟ್ರಪತಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮನವಿ ನೀಡಿದರು ಈ ಸಂದರ್ಭದಲ್ಲಿ ಅಶೋಕ ಪೂಜೇರಿ,ಸಿದಲಿಂಗ ದಳವಾಯಿ, ಚಂದ್ರಶೇಖರ ಕೊಣ್ಣೂರ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಾಗಿಯಾಗಿದ್ದರು.
ವರದಿ :-ಮನೋಹರ ಮೇಗೇರಿ