Ad imageAd image

ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ

Bharath Vaibhav
ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ
WhatsApp Group Join Now
Telegram Group Join Now

ಸಿರುಗುಪ್ಪ : –ನಗರದ ಸಿ.ಡಿ.ಪಿ.ಓ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯರವರ 917ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶಿರಸ್ತೆದಾರ ಸಿದ್ದಾರ್ಥ್ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಸಿಗೆ ನೀರೆರೆದು ಉದ್ಘಾಟಿಸಿದರು.

ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡಿದ ಭೀಮಲಿಂಗಪ್ಪ ಅವರು 16ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಚಂದಯ್ಯನವರು ವಿಜಯಪುರ ತಾಲೂಕಿನ ಶಿವಣಗಿ ಜನಿಸಿದ್ದಾರೆ.ವೃತ್ತಿಯಲ್ಲಿ ನೂಲನ್ನು ತಯಾರಿಸಿ ಕೃಷಿಗೆ ಕುಟುಂಬಗಳಿಗೆ ಅಗತ್ಯವಿರುವ ಪರಿಕರಗಳನ್ನುತಯಾರಿಸುವುದೇ ಅವರ ಮೂಲ ಕಸುಬು ಆಗಿತ್ತು.

ಹಠವಾದಿ, ಛಲವಾದಿಯೂ ಆಗಿದ್ದ ಚಂದಯ್ಯ ಶರಣರು ಕಾಯಕವನ್ನು ದೇವರಂತೆ ಕಂಡವರು, ಕಾಯಕ ಯಾವುದಾದರೇನು ತನು ಮನ ಪರಿಶುದ್ದವಾಗುವ ಕಾರ್ಯವನ್ನು ಮಾಡಬೇಕೆಂದಿದ್ದಾರೆ. ಅವರ ತತ್ವಾದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದೇ ವೇಳೆ ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುಜಾತ, ಸಮಾಜ ಕಲ್ಯಾಣ ಇಲಾಖೆ ಗ್ರೇಡ್-2 ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ಕಾಂಗ್ರೇಸ್ ಹಿರಿಯ ಮುಖಂಡ ಬಿ.ಎಮ್.ಸತೀಶ, ಮಾಜಿ ಸೈನಿಕ ಈರಪ್ಪ, ತಾಲೂಕು ಕೊರಚ ಕೊರಮ ಸಮಾಜದ ಅಧ್ಯಕ್ಷ ಗೋಪಾಲಪ್ಪ, ಗೌರವಾಧ್ಯಕ್ಷ ಟಿ.ಸಿದ್ದಯ್ಯ, ಉಪಾಧ್ಯಕ್ಷರಾದ ಬಿ.ವೆಂಕಟೇಶ, ಕೆ.ಸುಂಕಪ್ಪ, ಖಜಾಂಚಿ ಬಾಗೇವಾಡಿ ವೆಂಕಟೇಶ, ಕುರುವಳ್ಳಿ ತಿಮ್ಮಯ್ಯ, ಇನ್ನಿತರ ಇಲಾಖೆಯ ಅಧಿಕಾರಿಗಳು ಸಮಾಜದ ಮುಖಂಡರು ಇದ್ದರು.

ವರದಿ.ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!