ಹುಬ್ಬಳ್ಳಿ :-ಕೆನರಾ ಬ್ಯಾಂಕ್‌ನ ವೃತ್ತ ಕಛೇರಿಯಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಡೆಬ್ಟ್ಸ್ ರಿಕವರಿ ಟ್ರಿಬ್ಯುನಲ್ ಬೆಂಗಳೂರು ಹಾಗೂ ಕೆನರಾ ಬ್ಯಾಂಕ್ ಇವುಗಳ ಸಹಯೋಗದಲ್ಲಿ ವಿಶೇಷ ಬ್ಯಾಂಕ್ ಲೋಕ ಅದಾಲತ್ ನ್ನು ಆಯೋಜಿಸಲಾಗಿತ್ತು.
ಲೋಕ್ ಅದಾಲತ್‌ನಲ್ಲಿ ಸಂಧಾನಕಾರರಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಸ್.ಮಿಟ್ಟಲಕೋಡ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಎನ್.ಸಿ.ಇಳಗೇರ್ ಹಾಗೂ ಪರಶುರಾಮ್ ಗೌಡರ ಭಾಗವಹಿಸಿದ್ದರು.
ಅದಾಲತ್‌ನಲ್ಲಿ ಒಟ್ಟು 22 ಪ್ರಕರಣಗಳಲ್ಲಿ ರಾಜಿ ಸಂಧಾನವಾಗಿ ಒಟ್ಟು ರೂ. 12,59,26,000 ಮೊತ್ತವನ್ನು ಸಂಗ್ರಹಿಸಲಾಯಿತು.
ವಿಶೇಷ ಬ್ಯಾಂಕ್ ಲೋಕ್ ಆದಾಲತ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್ ದೊಡ್ಡಮನಿ, ಡಿಅರ್‌ಟಿ ಅಧಿಕಾರಿಗಳಾದ ಇಮ್ತಿಯಾಜ ಅಲಿ, ರಂಜನ್ ಕೇಳಕರ್, ಸುರೇಶ ಕುಮಾರ, ಕೆನರಾ ಬ್ಯಾಂಕ್‌ನ ಅಧಿಕಾರಿಗಳಾದ ವಿಜಯಕುಮಾರ, ಜಗನ್ನಾಥ ಪಿ. ಪಾಣಿಗ್ರಹಿ, ಎ.ವಿ.ರಾಜಶೇಖರ, ಸಾರ್ಥಕ ಮೊಹಂತಿ ಇತರರು ಉಪಸ್ಥಿತರಿದ್ದರು.
ವರದಿ:- ನಿತೀಶಗೌಡ ತಡಸ ಪಾಟೀಲ್