ರಾಯಬಾಗ್ :- ಪ್ರವಾಸಿ ಮಂದಿರದ ಸಭಾ ಹಾಲಿನಲ್ಲಿ ಶೈಕ್ಷಣಿಕ ಚಿಕ್ಕೋಡಿ ಜಿಲ್ಲೆಯ ಅಹಿಂದ್ ಒಕ್ಕೂಟ ಸಂಘಟನೆ ಎಲ್ಲ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಮಹತ್ವದ ಪ್ರಥಮ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವರಾಜ್ ಅರಸರ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾರು ಹಾಕಿ ತೆಂಗಿನಕಾಯಿ ಹೊಡೆಯುವ ಮೂಲಕ ಈ ಸಭೆ ಪ್ರಾರಂಭಿಸಲಾಯಿತು.
ನಂತರ ಈ ಸಭೆಯನ್ನು ಉದ್ದೇಶಿಸಿ ಅಹಿಂದ ಸಂಘಟನೆಯ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ್ ಮಚ್ಚನವರ, ಕಾಗವಾಡ ತಾಲೂಕಿನ ಅಧ್ಯಕ್ಷರಾದ ವಿಲಾಸ್ ರಾಜಮಾನೆ, ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜು ಮುಂಡೆ, ಕಾಗವಾಡದ ಉಪಾಧ್ಯಕ್ಷರು ಲಕ್ಷ್ಮಣ್,ಅವರು ಸಂಘಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಘಟನೆಯನ್ನು ಯಾವ ರೀತಿಯಾಗಿ ಬಲಪಡಿಸಬೇಕು ಹಾಗೂ ಚಿಕ್ಕೋಡಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯಕೆ ಕುರಿತು ಶೈಕ್ಷಣಿಕ ಚಿಕ್ಕೋಡಿ ಜಿಲ್ಲೆಯ ಮತ್ತು ಮುಂದಿನ ದಿನಗಳಲ್ಲಿ ಶೀಘ್ರವೇ ಸಚಿವರಾದ ಶ್ರೀ ಮಾನ್ಯ ಸತೀಶ್ ಅಣ್ಣ ಜಾರಕಿಹೊಳಿ ಅವರಿಗೆ ಭೇಟಿಯಾಗಿ ಚಿಕ್ಕೋಡಿ ಜಿಲ್ಲಾ ಅಹಿಂದ ಸಂಘಟನೆಯ ಕುರಿತು ಸಚಿವರೊಂದಿಗೆ ಮಾತನಾಡಿ ಮುಂದಿನ ಕಾರ್ಯಕ್ರಮ ಕೈಗೊಳ್ಳ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಭೆಯ ಸಂದರ್ಭದಲ್ಲಿ ನಿಪ್ಪಾಣಿ ತಾಲೂಕಿನ ವಿಶ್ವನಾಥ ಹಲಗೆ, ಹನುಮಂತ ಸವಿನೆಸಾಕಳೆ, ಸುರೇಶ್ ಸೈನಸಾಕಳೆ, ನಾಗೇಶ್ ಪೂಜಾರಿ, ಕು ರೂಪಾ ಗೋಕಾಕ ಜಿಲ್ಲಾ ಮಹಿಳಾ ಅಧ್ಯಕ್ಷರು ಶ್ರೀ ರೋಹಿಣಿ ಕಾಂಬಳೆ ರಾಯಬಾಗ ತಾಲೂಕು ಅಧ್ಯಕ್ಷರು ಶ್ರೀ ಪ್ರಶಾಂತ್ ಗಸ್ತಿ ಚಿಕ್ಕೋಡಿ ತಾಲೂಕು ಅಧ್ಯಕ್ಷರು ಶ್ರೀ ಸುರೇಶ್ ಮಾದರ್ ಅಥಣಿ ತಾಲೂಕು ಅಧ್ಯಕ್ಷರು ಶ್ರೀ ಮತಿ ಭಾರತಿ ಸಂಗಯ್ಯ ಗೊಳ್ ರಾಯಬಾಗ ತಾಲೂಕು ಪ್ರಧಾನ ಕಾರ್ಯದರ್ಶಿಗಳು ಅಮೀನ್ ಜಾತಗಾರ್ ಜಿಲ್ಲಾ ಕಾರ್ಯಧ್ಯಕ್ಷರು ರಾಯಬಾಗ ತಾಲೂಕು ಸಮತೀಯ್ ಅಧ್ಯಕ್ಷರು ಕೊಚೇರಿ ಗೌರವ ಅಧ್ಯಕ್ಷರು ಪೂಜಾರಿ ಅಥಣಿ ತಾಲೂಕು ಅಧ್ಯಕ್ಷರು ಶ್ರೀಮತಿ ಸಾಯಂವ್ ಇಚೇರಿ ಇನ್ನು ಚಿಕ್ಕೋಡಿ ಪದಾಧಿಕಾರಿಗಳು ಈ ಅಹಿಂದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ವರದಿ :-ರಾಜು ಮುಂಡೆ