ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಕೇಂದ್ರ ಸರ್ಕಾರ ಕೆಟಗರಿ ಭದ್ರತೆ ನೀಡಿದೆ.
ಕೇಂದ್ರ ಗುಪ್ತಚರ ಇಲಾಖೆ ರಾಜ್ಯಪಾಲರಿಗೆ ಕೆಟಗರಿ ಭದ್ರತೆ ನೀಡಿದ್ದು, ಬುಲೆಟ್ ಫ್ರೂಫ್ ಕಾರನ್ನು ಸಹ ನೀಡಲಾಗಿದೆ.ಝಡ್ ಕೆಟಗರಿ ಭದ್ರತೆಯಲ್ಲಿ 22 ಸಿಬ್ಬಂದಿ ಇರುತ್ತಾರೆ. ಅದರಲ್ಲಿ ಕೆಲವು ಕಮಾಂಡೋಗಳು ಮತ್ತು ಪೊಲೀಸರು ಕೂಡ ಸೇರಿರುತ್ತಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಭೂ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ರಾಜ್ಯ ಲೋಕಾಯುಕ್ತಕ್ಕೆ (ಒಂಬುಡ್ಸ್ಮನ್) ಅನುಮತಿ ನೀಡಿರುವುದು ರಾಜ್ಯದಲ್ಲಿ ಭಾರಿ ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ಬಿಜೆಪಿ ಮುಖ್ಯಮಂತ್ರಿಯ ರಾಜೀನಾಮೆಗೆ ಕರೆ ನೀಡಿದ್ದರೆ, ಕಾಂಗ್ರೆಸ್ ಈ ಆರೋಪಗಳನ್ನು “ರಾಜಕೀಯ ಪ್ರೇರಿತ” ಎಂದು ತಿರಸ್ಕರಿಸಿದೆ.ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಮೈಸೂರಿನ ಸ್ನೇಹಮಾಯಿ ಕೃಷ್ಣ ಮತ್ತು ಬೆಂಗಳೂರಿನ ಪ್ರದೀಪ್ ಕುಮಾರ್ ಎಸ್ಪಿ ಅನುಮತಿ ಕೋರಿದ್ದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಡಾದಿಂದ ತಮ್ಮ ಪತ್ನಿಗೆ ಪರಿಹಾರ ಭೂಮಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ದೇವರಾಜ್ ಕೂಡ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.