ಅಳ್ನವಾರ:-ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಅಳ್ನವಾರ ಪಟ್ಟಣಕ್ಕೆ ಪ್ರತಿ ಮಂಗಳವಾರ ಬರುವ ಬಡ ರೈತ ವ್ಯಾಪಾರಸ್ಥರಿಗೆ ಟ್ರಾಫಿಕ್ ಕಂಟ್ರೋಲ್ ಮಾಡುವ ನೆಪದಲ್ಲಿ ಕಾಳು, ಕಡಿ ಹಾಗೂ ಕಡಲೆಕಾಯಿ, ತರಕಾರಿ ಮಾರುವ ವ್ಯಾಪಾರಸ್ಥರಿಂದ 100 ರೂಪಾಯಿಗಳಿಂದ 500 ರೂಪಾಯಿ ರವರೆಗೆ ದಂಡದ ನೆಪದಲ್ಲಿ ಹಣ ವಸೂಲಿ ಮಾಡುವುದಲ್ಲದೇ, ಅನವಶ್ಯಕವಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ಮಾಡುತ್ತಿದ್ದಾರಂತೆ.
ಇನ್ನೂ ಇಲ್ಲಿ ವಾರಕ್ಕೆ ಒಂದು ಸಲ ಬಂದು ವ್ಯಾಪಾರ ಮಾಡಿ ಜೀವನ ಸಾಗಿಸುತ್ತೀರೋ ಬಡ ರೈತ ವ್ಯಾಪಾರಸ್ಥರಿಗೆ ಈ ಅಳ್ನವಾರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನೇತೃತ್ವದಲ್ಲಿ ದಂಡದ ನೆಪದಲ್ಲಿ ವಸೂಲಿ ಮಾಡುತ್ತಿರುವುದರಿಂದ ದಿಕ್ಕೇ ತೋಚದಂತಾಗಿದೆ.
ಆದ್ದರಿಂದ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಬೇತುಕೊಟ್ಟು, ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಬಡ ರೈತ ವ್ಯಾಪಾರಸ್ಥರ ಮೇಲಿನ ದಬ್ಬಾಳಿಕೆ ನಿಲ್ಲುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:- ಬಸವರಾಜು.