ಮುದಗಲ್ಲ:- ಪಟ್ಟಣದ ಕ್ರೀಸ್ತ ಜ್ಯೋತಿ ಪ್ರೌಢ ಶಾಲೆಯಲ್ಲಿ ಮುದಗಲ್ ವಲಯ ಮಟ್ಟದ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಜರುಗಿತು.
ಕಾರ್ಯಕ್ರಮದಲ್ಲಿ ತಾಲೂಕು ಅಧಿಕಾರಿಗಳು ಜ್ಯೋತಿಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರಮುಖ್ಯ ಅತಿಥಿಗಳು ಕ್ರೀಡಾ ಧ್ವಜಾರೋಹಣನೆರವೇರಿಸಿದರು.
ಮುದಗಲ್ ವಲಯ ಮಟ್ಟದ10 ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಧ್ವಜ ವಂದನೆ ಕಾರ್ಯಕ್ರಮಜರುಗಿತು.ಹಾಕಿ ಕ್ರೀಡಾ ಮಾಂತ್ರಿಕದ್ಯಾನ ಚಂದ್ ಅವರ ಭಾವಚಿತ್ರಕ್ಕೆ ಪುಷ್ಟ ನಮನಸಲ್ಲಿಸಿದರು.ತದನಂತರದಲ್ಲಿ ಮುಖ್ಯ ಅತಿಥಿಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ವನ್ನು ಉದ್ದೇಶಿಸಿ ತಾಲೂಕು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ್ ಮಾತನಾಡಿ. ಒಬ್ಬ ಉತ್ತಮ ನಾಗರೀಕರಾಗಲು ಕ್ರೀಡೆ ಒಂದು ಮಾಧ್ಯಮವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ದೇಶದಲ್ಲಿನ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು. ನಾವೆಲ್ಲರು ಕ್ರೀಡಾಪಟುಗಳಿಗೆ ಹಾಗು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿರುವ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.
ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗು ತರಬೇತಿಯನ್ನು ನೀಡಿ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು.ನಮ್ಮ ದೈಹಿಕ ಮಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ತಾಲೂಕಿನಲ್ಲಿ ಅತ್ಯಂತ ಕ್ರಿಯಾಶೀಲ ದೈಹಿಕ ಶಿಕ್ಷಕರು ಇದ್ದಾರೆ. ಹೀಗಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರ್ಟಿನ್ ಸಿಸ್ಟರ್ ಚನ್ನ ಬಸವರಾಜ ಮೇಟಿ, ಪುರಸಭೆ ಸದಸ್ಯ ಶ್ರೀ ಕಾಂತ ಗೌಡ ಪಾಟೀಲ್,ಅನೀಶ್ ಪೋಲಿಸ್ ಇಲಾಖೆ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ, ಹನುಮಂತಪ್ಪ ಕೊಳಗೇರಿ,ಮಹ್ಮದ್ ಶರೀಪ್ , ಬಸವರಾಜ ಸಜ್ಜನ್,ನೀಲಣ್ಣಮುಖ್ಯ ಗುರುಗಳು,ಸುಶಿಶೀಲ ರಾಮಚಂದ್ರ ಡಾವಳೆ ಸಿಆರ್ ಪಿ ಮುದಗಲ್,ನಾಗರಾಜ್ ತಳವಾರ ,ರಾಬಿನ್ ಹಸನ ಅಲಿ,ಲಿಲಿ ಫೆರ್ನಾಂಡಿಸ್ ಮುಖ್ಯ ಗುರುಗಳು,ಮಲ್ಲಪ್ಪ ಖಜಾಂಚಿ,ಮಕಂದರ್ ಮುಖ್ಯ ಗುರುಗಳು,ಶಿಕ್ಷಕ ಮಹಾಂತೇಶ ಚಲುವಾದಿ, ದೈಹಿಕ ಶಿಕ್ಷಕಾದ ಎಸ್ ಎನ್ ಅಕ್ಕಿ ,ಮರಿಯಮ್ಮ ಸಿಸ್ಟರ್ ಮುಖ್ಯಗುರುಗಳು.ದೈಹಿಕ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ:- ಮಂಜುನಾಥ ಕುಂಬಾರ